ಕಸಾಪ ಚುನಾವಣೆ: ಈ ಬಾರಿ ಉತ್ತಮ ಪ್ರತಿಕ್ರಿಯೆ

0
85

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಹಾಕಿಕೊಂಡಿದ್ದೇನೆ. ಹೋದ ಕಡೆಯೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಕಪಪ್ಪಳದ‌ ಜಿಲ್ಲಾ ಕಸಾಪ ಮಾಜಿ ಆಧ್ಯಕ್ಷ ಹಾಗೂ ಪ್ರಸ್ತುತ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆ ಬಯಸಿರುವ ಶೇಖರಗೌಡ ಮಾಲಿ ಪಾಟೀಲ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಈಗಾಗಲೇ ಬೆಂಗಳೂರು, ಮಡಿಕೇರಿ, ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಲೋಚನೆ ನೀಡಿ ಬಂದಿದ್ದೇನೆ ಎಂದು ತಿಳಿಸಿದರು.

Contact Your\'s Advertisement; 9902492681

ನಾಳೆ ಯಾದಗಿರಿ, ರಾಯಚೂರಿಗೆ ತೆರಳಿ ಅಲ್ಲಿನ ಸಾಹಿತಿ ಕಸಾಪ ಪದಾಧಿಕಾರಿ ಹಾಗೂ ಸದಸ್ಯರನ್ನು ಭೇಟಿ ಮಡುವೆ. ನಂತರ ಬೆಂಗಳೂರು, ಚಿಕ್ಕಮಗಳೂರಿಗೆ ತೆರಳಿ ಚುನಾವಣೆ ಕುರಿತು ಹಾಗೂ ತಮ್ಮನ್ನು ಆಶೀರ್ವದಿಸುವಂತೆ ಕೋರಲಾಗುವುದು ಎಂದು ತಿಳಿಸಿದರು. ತಾವು ಈ ಬಾರಿಯ ಸ್ಪರ್ಧೆಯಲ್ಲಿ ತುರುಸಿನ ಸ್ಪರ್ಧೆ ಒಡ್ಡಲಿದ್ದು, ಎಲ್ಲ ಕಡೆ ಸುತ್ತಾಡಿ ಮತದಾರರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

105 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಲು, ಕನ್ನಡ ಭಾಷೆ, ಕನ್ನಡ ವಿಶ್ವ ಕನ್ನಟ ಮೊದಲಾದ ಸಮಸ್ತ ಕನ್ನಡಿಗರ ಆಶಯಗಳನ್ನು ನನಾಗಿಸಲು, ಕೇಂದ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಚುನಾವಣೆಯಲ್ಲಿ ನನಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ನೀಡಬೇಕು ಎಂದು ಮತದಾರ ಬಾಂಧವರಲ್ಲಿ ಪ್ರಾರ್ಥಿಸಿದರು.

ಜಿಲ್ಲಾ ಕಸಾಪ ಅದ್ಯಕ್ಷ ವೀರಭದ್ರ ಸಿಂಪಿ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಕೋಶಾಧ್ಯಕ್ಷ ದೌಲತರಾಯ ಮಾಲಿ ಪಾಟೀಲ, ಪ. ಮಾನು ಸಗರ, ಕೆ.ಎಸ್. ಬಂಧು, ಸಿ.ಎಸ್. ಮಾಲಿಪಾಟೀಲ, ಡಾ. ಸೂರ್ಯಕಾಂತ ಪಾಟೀಲ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here