ವಾಡಿ ಪುರಸಭೆ: ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ನಾಳೆ

0
39

ವಾಡಿ: ಪಟ್ಟಣದ ಪುರಸಭೆಯ ಆಡಳಿತದ ಎರಡನೇ ಅವಧಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಝರೀನಾಬೇಗಂ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ತಿಮ್ಮಯ್ಯ ಪವಾರ ಭೋವಿ ಅವರ ಪದಗ್ರಹಣ ಸಮಾರಂಭ ಸೆ.೧೦ ರಂದು ಬೆಳಗ್ಗೆ ೧೧:೩೦ಕ್ಕೆ ಏರ್ಪಡಿಸಲಾಗಿದೆ.

ಇದೇ ವೇಳೆ ನಗರದ ಅಭಿವೃದ್ಧಿ ಪರ ಹಲವಾರು ವಿಷಯಗಳ ಕುರಿತ ಚರ್ಚೆ ನಡೆಸಲು ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ಆಯೋಜಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here