ಮಳೆಯಿಂದ ಹಾನಿಯಾದ ರೈತರ ಹೊಲಗಳಿಗೆ ಉಪತಹಶೀಲ್ದಾರ ರಾಘನಾಥ ಭೇಟಿ

0
45

ಕಲಬುರಗಿ: ಮಂಗಳವಾರ ಸುರಿದ ಧಾರಕಾರ ಮಳೆಗೆ ನಿಡಗುಂದಾ ಗ್ರಾಮದ ಸುತ್ತಮುತ್ತಲಿನ ಇರುವ ಕಬ್ಬಿನ ತೋಟಗಳಿಗೆ ಭೇಟಿ ಕೊಟ್ಟ ಸುಲೇಪೇಟ್ ಉಪತಹಶೀಲ್ದಾರ

ರಾಘನಾಥ ಅವರು ರೈತರಿಂದ ಮಾಹಿತಿ ಪಡೆದರು. ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲದ ಸುಮಾರಿಗೆ ಒಂದು ತಾಸುಗಿಂತಲೂ ಅಧಿಕ ಸಮಯದವರೆಗೆ ಧಾರಕಾರ ಮಳೆ ಸುರಿದ ಕಾರಣ ಗ್ರಾಮದ ಸುತ್ತಮುತ್ತಲಿನಲ್ಲಿ ಇರುವ ಕಬ್ಬು ಬೆಳೆದ ರೈತರು, ಕಬ್ಬು ಸಂಪೂರ್ಣವಾಗಿ ನೆಲಸಮವಾಗಿರುವ ಕುರಿತು ಉಪತಹಶೀಲ್ದಾರ ಅವರಿಗೆ ಮಾಹಿತಿ ನೀಡಿದರು.

Contact Your\'s Advertisement; 9902492681

ರೈತ ಮಲ್ಲಪ್ಪ ಅವರು ತಮ್ಮ ಎರಡು ಎಕರೆ ತೋಟದಲ್ಲಿ ಹಾಕಿರುವ ಕಬ್ಬು ಸಂಪೂರ್ಣ ನೆಲಸಮವಾಗಿದೆ. ಇದರಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತ ನಷ್ಷವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅದಷ್ಟು ಶೀಘ್ರವಾಗಿ ಮಳೆಯಿಂದ ಸಂಪೂರ್ಣವಾಗಿ ಹಾನಿಯಾದ ರೈತರ ಬೆನ್ನಿಗೆ ನಿಲ್ಲಬೇಕು.ಕೊರೋನಾ ಸಮಯದ ಈ ಸಂದರ್ಭದಲ್ಲೂ ಹಣದ ಕೊರತೆಯ ನಡುವೆ ನಾವು ಕಬ್ಬು ಬೆಳೆ ಹಾಕಿದ್ದೇವು ಆದರೆ ಧಾರಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಸಂಪೂರ್ಣ ನೆಲಸಮವಾಗಿದೆ.

ಕಬ್ಬು ವರ್ಷದ ಬೆಳೆಯಾಗಿದ್ದು, ಈಗ ಅದಕ್ಕೆ 6 ತಿಂಗಳ ಬೆಳೆಯಾಗಿದ್ದು, ಇನ್ನೂ ಮೂರು-ನಾಲ್ಕು ತಿಂಗಳಲ್ಲಿ ಕಾರ್ಖಾನೆಗೆ ಹೋಗಬೇಕಿತ್ತು. ಆದರೆ ಕೈಗೆ ಬಂದ ತುತ್ತು ಬೈಯಿಗೆ ಬರಲಿಲ್ಲ ಅಂತಹ ದು:ಖ ತೋಡಿಕೊಂಡರು.

ಸ್ಥಳದಲ್ಲೇ ಇದ್ದ ನಿಡಗುಂದಾ ಗ್ರಾಮದ ಗ್ರಾಮ ಲೇಖಪಾಲಕರಾದ ಉದಯ ಎಸ್ ಟಾಕೂರ್ ಅವರಿಗೆ ಸಾಯಂಕಾಲ ಒಳಗೆ ವರದಿ ನೀಡಲು ತಿಳಿಸಿದರು.

ಈ ಸಂದರ್ಭದಲ್ಲಿ ಇನ್ನುಳಿದ ರೈತರಾದ ರಾಜು ನಿಷ್ಠೆ, ಮಹಿಪಾಲ ರೆಡ್ಡಿ, ಸಂಪತ್ ಕುಮಾರ ಸಜ್ಜನ ,ಲಾಲಪ್ಪ ಕಟ್ಟಿಮನಿ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.

ಸಂಜೀವಕುಮಾರ ಎಸ್. ನಿಡಗುಂದಾ ತಾ.ಚಿಂಚೋಳಿ ಜಿ.ಕಲಬುರಗಿ ಸಂಪರ್ಕಿಬೇಕಾದ ನಂಬರ್‌:-7259826157

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here