ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಪೋಷಣಾಭಿಯಾನ ಕಾರ್ಯಕ್ರಮ: ಪದ್ಮಾವತಿ ನಾಯಕ

0
110

ಸುರಪುರ: ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ,ಅದರಂತೆ ಈಗ ಪೋಷಣ ಅಭಿಯಾನದ ಮೂಲಕ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸುರಪುರ ವಲಯದ ಮೇಲ್ವಿಚಾರಕಿ ಪದ್ಮಾವತಿ ನಾಯಕ ಮಾತನಾಡಿದರು.

ನಗರದ ಶಿಶು ಅಭೀವೃಧ್ಧಿ ಯೋಜನಾಧಿಕಾರಿಗಳ ಕಚೇರಿ ಆವರಣದಲ್ಲಿ ಪೋಷಣ ಅಭಿಯಾನ ೨೦೨೦ರ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಅಂಗನವಾಡಿಗೆ ಬರುವ ಪ್ರತಿಯೊಂದು ಮಗುವನ್ನು ಕಾರ್ಯಕರ್ತೆಯರು ತಮ್ಮ ಮಕ್ಕಳೆಂದು ಭಾವಿಸಿ ಮಕ್ಕಳಿಗೆ ಉತ್ತಮವಾದ ಅಕ್ಷರಭ್ಯಾಸ ಮಾಡಿಸುವ ಜೊತೆಗೆ ಮಕ್ಕಳ ಬೌಧ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಗಮನ ಹರಿಸುವ ಜವಬ್ದಾರಿ ನಿಮ್ಮದಾಗಿರುತ್ತದೆ. ಅಲ್ಲದೆ ಪೋಷಕರು ತಮ್ಮ ಮನೆಗಳ ಆವರಣದಲ್ಲಿನ ಖಾಲಿ ಜಾಗದಲ್ಲಿ ತರಕಾರಿ ಸೊಪ್ಪು ಬೆಳೆಸಿ ಮಕ್ಕಳಿಗೆ ಆಹಾರದ ರೂಪದಲ್ಲಿ ನೀಡಿದಲ್ಲಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಲಿದೆ,ಇದಕ್ಕೆ ತಾವೆಲ್ಲರು ಅರಿವು ಮೂಡಿಸಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ಜೇವರ್ಗಿ ಭಾಗ್ಯಶ್ರೀ ಬಸಮ್ಮ ಬೊಮ್ಮನಹಳ್ಳಿ ಕಮಲಮ್ಮ ಶಶಿಕಲಾ ಗೋಪಮ್ಮ ನಸೀಮಾಬಾನು ರಂಗುಬಾಯಿ ಸುರೇಖಾ ನಾಗಮ್ಮ ರಾಧಾಬಾಯಿ ಅಕ್ಷತಾ ಗುಳಗಿ ಸೈನಾಜ್ ಸುನೀತಾ ಬಿಲ್ಲವ್ ಸಬೀಯಾ ಕಸ್ತೂರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here