ಕಲಬರಗಿ: ಇಂದು ಗಣೇಶ ಕೋಆಪರೇಟಿವ್ ಬ್ಯಾಂಕ್ ವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಿರ್ಮಾಣವಾಗುತ್ತಿರವ ಮಹಿಳಾ ವಸತಿನಿಲಯದ ಲೈಬ್ರರಿ ಹಾಲ್ ಗಾಗಿ ದೇಣಿಗೆಯಾಗಿ ಹತ್ತು ಲಕ್ಷ ರೂಪಾಯಿಗಳನ್ನು ಚೆಕ್ ಮುಖಾಂತರ ನೀಡಲಾಯಿತು.
ಚೆಕ್ ನ್ನು ಗಣೇಶ ಕೋಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಶಾಂತಕುಮಾರ್ ಬಿಲಗುಂದಿ ಅವರು, ಶಾಸಕರೂ ವಸತಿನಿಲಯ ಕಟ್ಟಡದ ಅಧ್ಯಕ್ಷರಾದ ಶರಣಬಸಪ್ಪ ದರ್ಶನಾಪುರ ಅವರಿಗೆ ಹಸ್ತಾಂತರಿಸಿದರು.
ಈವೇಳೆಯಲ್ಲಿ ಬ್ಯಾಂಕ್ ವತಿಯಿಂದ ಶರಣಬಸಪ್ಪ ದರ್ಶನಾಪುರ, ವಸತಿ ನಿಲಯ ಕಟ್ಟಡ ಕಮೀಟಿಯ ಇನ್ ಚಾರ್ಜ್ ನೀಲಕಂಠ ಮೂಲಗೆ, ಮಹಾಸಭಾದ ಅಧ್ಯಕ್ಷರಾದ ಶರಣಕುಮಾರ ಮೋದಿಯವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ ವಾಲಿ, ಮಾಜಿ ಅಧ್ಯಕ್ಷರಾದ ಸೋಮಶೇಖರ ಗೋನಾಯಕ ಹಾಗೂ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರುಗಳಾದ ಮಣಿಲಾಲ್ ಶಹಾ, ಶಿವರಾಜ ಖೂಬಾ, ರವಿಕುಮಾರ್ ಐನಾಪುರ, ರಾಮು ಕೋಸಗಿ, ಮತಿ ಸೋನಾಬಾಯಿ ಕೋಣಿನ್, ಬಿಂದು ಶಹಾ, ರವಿ ಸರಸಂಬಿ, ನಾಗೇಂದ್ರ ಕಲ್ಯಾಣಿ, ನಿತಿನ್ ತಾಂದಳೆ, ಯುವ ಘಟಕದ ಗೌರವಾಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಉಪಸ್ಥಿತರಿದ್ದರು.