ಪ್ರಾದೇಶಿಕ ಅಸಮತೋಲನೆಯ ನಿವಾರಣೆ ರೇವೂರರವರಿಗೆ ಮನವಿ

0
76

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿರ್ವಾಹಣೆಯೆ ಮುಖ್ಯಗುರಿಯಾಗಿಟ್ಟುಕೊಂಡು ಕಾಲ ಮಿತಿಯಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕೆಂದು ಕೆ.ಕೆ.ಆರ್.ಡಿ.ಬಿಯ ನೂತನ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಹೈದ್ರಾಬಾದಕರ್ನಾಟಕಜನಪರ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ಮನವಿ ಮಾಡಿದ್ದಾರು.

ಕರ್ನಾಟಕ ರಾಜ್ಯ ರಚನೆಯಾದ ನಂತರ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ವಿಶೇಷ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಯ ಉದ್ದೇಶದಿಂದ ಸರ್ಕಾರ 1990 ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು, ಸ್ಥಾಪನೆಯಾಗಿ 30 ವರ್ಷಗಳು ಗತ್ತಿಸಿವೆ 371ಜೆ ಕಲಂ ತಿದ್ದುಪಡಿ ನಂತರ ಇದರಡಿ ಮಂಡಳಿ ಸ್ವಾಯತತ್ಯೆ ಪಡೆದು 7 ವರ್ಷಗಳು ಪೂರ್ಣಗೊಂಡಿವೆ.

Contact Your\'s Advertisement; 9902492681

ನೂತನ ಅಧ್ಯಕ್ಷರಾದ ನಂತರ ರೇವೂರರವರು ಪೂರ್ಣಾವದಿ ಸಮಯ ನೀಡುವುದರ ಜೊತೆಗೆ ಮಂಡಳಿಯ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಯ ಬಗ್ಗೆ ಪ್ರಮುಖ ಅಂಶಗಳ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ನೂತನ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here