ಕಲಬುರಗಿ: ಶರಣಜೀವಿ ಮಲ್ಲಣ್ಣ ನಾಗರಾಳ ಅವರ ಸುಪುತ್ರ ರಮೇಶ್ ನಾಗರಾಳ (45) ಅವರು ಇಂದು ಸಂಜೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಬಳಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಒಂದು ಮಗುವಿದ್ದು, ಕಾರ್ ರನ್ನಿಂಗ್ ವೇಳೆ ತಾವೇ ಮುಗ್ಗರಿಸಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕುಟುಂವ ಮೂಲಗಳು ತಿಳಿಸಿವೆ.
ಇದೇ ಮೇ.24ರಂದು ಅವರು ತಮ್ಮ ಜನುಮದಿನಾಚರಣೆ ಆಚರಿಸಿಕೊಂಡಿದ್ದರು. ನಾಳೆ ಅವರ ಅವರ ಪುತ್ರನ ಬರ್ತ್ ಡೇ ಇದ್ದು, ನಾಡಿದ್ದು ಅವರ ವಿವಾಹ ವಾರ್ಷಿಕೋತ್ಸವ ಇದೆ ಎಂದು ತಿಳಿದು ಬಂದಿದೆ. ರಮೇಶ್ ಒಮ್ಮಿದೊಮ್ಮೆಲೆ ಸಾವನ್ನಪ್ಪಿರುವುದರಿಂದ ಇಡೀ ಕುಟುಂಬಕ್ಕೆ ಸಿಡಿಲಾಘಾತವಾದಂತಾಗಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಎಂ.ಎಸ್.ಕೆ. ಮಿಲ್ ಬಳಿ ಇರುವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.