ತಾಲೂಕಿನಲ್ಲಿ ಎರಡು ದಿನಗಳ ಪೋಷಣ್ ಅಭಿಯಾನ ರಥ ಯಾತ್ರೆ: ಸಿಡಿಪಿಒ ಲಾಲ್ ಸಾಬ್

0
52

ಸುರಪುರ: ದೇಶದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು,ಅಂತಹ ಅಪೌಷ್ಠಿಕ ಮಕ್ಕಳಿರುವ ಜಿಲ್ಲೆಗಳಲ್ಲಿ ನಮ್ಮ ಯಾದಗಿರಿ ಜಿಲ್ಲೆಯೂ ಸೇರಿದೆ.ಆದ್ದರಿಂದ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲೆಂದು ತಾಲೂಕಿನಲ್ಲಿ ಎರಡು ದಿನಗಳ ಕಾಲ ಪೋಷಣ್ ಅಭಿಯಾನ ರಥಯಾತ್ರೆ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಲಾಲ್ ಸಾಬ್ ಪೀರಾಪುರ ತಿಳಿಸಿದರು.

ನಗರದ ಸಿಡಿಪಿಒ ಕಚೇರಿ ಬಳಿಯಲ್ಲಿ ನಡೆದ ರಥಯಾತ್ರೆ ಚಾಲನೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ,ಪೋಷಕರು ತಮ್ಮ ಮನೆಗಳ ಬಳಿಯಲ್ಲಿ ಖಾಲಿ ಜಾಗದಲ್ಲಿ ತರಕಾರಿ ಹಣ್ಣಿನ ಸಸಿಗಳನ್ನು ನೆಟ್ಟು ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಮುಂದಾಗಬೇಕು ಎಂದರು.

Contact Your\'s Advertisement; 9902492681

ರಥಯಾತ್ರೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ,ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ದೂರವಾಗಿಸಲು ಎಲ್ಲರು ಶ್ರಮಿಸಬೇಕಿದೆ.ಕೇವಲ ಒಂದು ಇಲಾಖೆಗೆ ಮಾತ್ರ ಇದು ಸೀಮಿತವಲ್ಲ ಎಲ್ಲಾ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳು ಕೂಡ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.

ರಥಯಾತ್ರೆಗೆ ಚಾಲನೆ ನೀಡಿದ ನಂತರ ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಮಾರುಕಟ್ಟೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಬಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು.ನಂತರ ರಂಗಂಪೇಟಯ ಮಾರ್ಗವಾಗಿ ನಾಲ್ವಡಿ ರಾಜಾ ವೆಂಟಕಪ್ಪ ನಾಯಕ ವೃತ್ತದ ಮೂಲಕ ಸುರಪುರಕ್ಕೆ ಬಂದು ಕೆಂಭಾವಿಗೆ ಹೊರಟಿತು.

ರಥಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಡಾ. ಹರ್ಷವರ್ಧನ ರಫಗಾರ ಶಿಕ್ಷಕ ನಿಂಗಣ್ಣ ಪೂಜಾರಿ ಸೂಪರವೈಜರ್ ಪದ್ಮಾವತಿ ಡಿ.ನಾಯಕ ಜಯಶ್ರೀ ಬಿರೆದಾರ್ ಪೋಷಣಾ ಅಭಿಯಾನದ ಸಿಬ್ಬಂದಿ ಕರಿಯಣ್ಣ ಪ್ರವೀಣ ವಿಭೂತೆ ಹಾಗು ಅಂಗನವಾಡಿ ಕಾರ್ಯಕರ್ತೆಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here