ರೈತರಿಗೆ ಪರ್ಯಾಯ ಜಮೀನು ನೀಡಲು ಪ್ರಯತ್ನ ಮಾಡಬಹುದು: ಸಚಿವ ಸತೀಶ್ ಜಾರಕಿಹೊಳಿ

0
60

ಬೆಳಗಾವಿ: ಹಲಗಾದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ರೈತರು ವಿರೋಧಿಸಿ ಕುರ್ಚಿ ಮುರಿದು ಗಲಾಟೆ ವಿಚಾರ. ಯಾವ ಡಿಸಿ ಬಂದರೂ ಎನು ಆಗುವದಿಲ್ಲ ಈ‌ ವಿಚಾರದಲ್ಲಿ ಡಿ ಸಿ ಹೆಲ್ಪ್ ಲೆಸ್, ಎಂದು  ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿ ಬೆಳಗಾವಿಯಲ್ಲಿ ಶಾಸಕಿ ಹೆಬ್ಬಾಳ್ಕರ್ ಗೆ‌ ಟಾಂಗ್ ನೀಡಿದರು.

ಅವರು ನಗರದಲ್ಲಿ ಮಾತನಾಡಿ, ಹಿಂದಿನ ಡಿಸಿ ಇರಲಿ‌ ಈ ಡಿಸಿ ಇರಲಿ ಜಮೀನು ಕೊಡೆಸುವದು ಅವರ ಜವಾಬ್ದಾರಿ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆ ಯೆ ಇಲ್ಲ. ರೈತರಿಗೆ ಸುಳ್ಳು ಭರವಸೆ ನೀಡಲು ಆಗುವದಿಲ್ಲ. ಪಾರ್ಮಾಲಟಿ ಮುಗಿದು ಹೋಗಿದೆ ಜಮೀನು ಸರಕಾರ ತಾಬಾದಲ್ಲಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಅನ್ಯಾಯ ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕು ಇದಕ್ಕೆ ಪರ್ಯಾಯ ಮಾರ್ಗವಿಲ್ಲ. ಈ ಭೂಸ್ವಾಧಿನ ಪ್ರಕ್ರಿಯೆಯನ್ನು ವಿಷೇಶ ಪ್ರಕರಣ ಎಂದು ಪರಿಗಣಿಸಿದೆ. ಪ್ರತಿ ಎಕರೆ ಜಮೀನಿಗೆ 30 ಲಕ್ಷ ಕೊಡಿಸುವ ಭರವಸೆ ಸಚಿವ ಸತೀಶ್ ‌ಜಾರಕಿಹೊಳಿ ನೀಡಿದರು.

ನಿನ್ನೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮುಂದೆ ರೈತರು ಸಯಂಮ ಕಳೆದುಕೊಂಡ ಗಲಾಟೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಉತ್ತರಿಸದ ಸಚಿವರು, ಶಾಸಕರು ಸರ್ಕಾರದ ಒಂದು ಭಾಗ, ರೈತರಿಗೆ ತಿಳಿ ಹೇಳುವದು ಅವರ ಕರ್ತವ್ಯ ಎಂದು ಈ ಮೂಲಕ ಲಕ್ಷ್ಮೀ ಗೆ ನೇರವಾಗಿ ಟಾಂಗ್ ಕೊಟ್ಟರು.

ಲಕ್ಷ್ಮೀ ಹೆಬ್ಬಾಳಕರ್ – ಸತೀಶ್ ಜಾರಕಿಹೊಳಿ‌ ಶೀತಲ ಸಮರದ ಪ್ರಶ್ನೆಯೆ ಇಲ್ಲ. ಸರ್ವೋಚ್ಛ ನ್ಯಾಯಾಲಯದ  ರೂಲಿಂಗ್ ಇದೆ. ಜಮೀನು ಮರಳಿ‌ ನೀಡಲು ಕಾನೂನಿನಲ್ಲಿ ಅವಕಾಶ ವಿಲ್ಲ. ರೈತರಿಗೆ ಪರ್ಯಾಯ ಜಮೀನು ನೀಡಲು ಪ್ರಯತ್ನ ಮಾಡಬಹುದೆಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here