ರೈತರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

0
68

ಬೆಳಗಾವಿ: ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಒಳಚರಂಡಿ ನೀರು ಶುದ್ದೀಕರಣ ಘಟಕ ಸ್ಥಾಪನೆ‌ ವಿರೋಧ ಹಿನ್ನೆಲೆ, ನಾನು ಪ್ರಕರಣದ ಮಧ್ಯಸ್ಥಿಕೆ ವಹಿಸುತ್ತೇನೆ. ರೈತರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ ಎಂದು ಬೆಳಗಾವಿ ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.

ರೈತರಿಗೆ ಹೆಬ್ಬಾಳ್ಕರ್ ಮನವೊಲಿಸಬೇಕು. ರೈತರ ಜಮೀನು ಯಾರು ಎನೇ ಮಾಡಿದರು ಉಳಿಸಲು ಆಗಲ್ಲ ಅಂದಿದ್ದ ಸಚಿವ ಸತೀಶ್ ಜಾರಕಿಹೊಳಿ. ಫಲವತ್ತಾದ ಭೂಮಿಯನ್ನ ಯಾಕೆ ವಶಪಡಿಸಿಕೊಂಡಿರಿ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಯಾರಾದರೂ ರೈತರು ಆತ್ಮಹತ್ಯೆ ಮಾಡಿಕೊಂಡರೆ. ಸರ್ಕಾರಕ್ಕೆ ನಮಗೆ ನಿಮಗೆ ದೊಡ್ಡ ಕಳಂಕ ಬರುತ್ತೆ. ರೈತರ ವಿಚಾರದಲ್ಲಿ ಚೆಲ್ಲಾಟ ಆಡುವುದು ಬೇಡ. ನಮ್ಮ ಮೇಲೆ ಬೋಲ್ಡೊಜರ್ ಹಾಕಲು ಆಗುವುದಿಲ್ಲ. ಆಗುತ್ತೆ ಅಂತಾ ಆದರೆ ಅದಕ್ಕೆ ಎನೂ ಮಾಡಲು ಆಗುವುದಿಲ್ಲ. ರೈತರಿಗೆ ಸರಿಯಾದ ಪರಿಹಾರ ಸಿಗುವವರೆಗೂ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ರೈತರಿಗೂ ಜಿಲ್ಲಾಡಳಿತಕ್ಕೂ ನಾನು ಮನವೊಲಿಸುವ ಕೆಲಸ ಮಾಡುತ್ತೇನೆ. ರೈತರಿಗೆ ಅನ್ಯಾಯ ಆದ್ರೂ ಸಹಿಸಿಕೊಳ್ಳಬೇಕು ಅನ್ನುವುದು ಸಮಂಜಸ ಅಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here