ಸುರಪುರ: ನಗರದ ಕುಂಬಾರಪೇಟೆಯ ವೃತ್ತದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿಯ ಬ್ಯಾನರ್ ಹಾಕಿ ರಾಘವೇಂದ್ರ ಹುಣಸೂರವರಿಗೆ ಅಂಬೇಡ್ಕರ ಅಭಿಮಾನಿಗಳು ತಮ್ಮ ಬೆಂಬಲ ಘೋಷಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಜಗತ್ತೆ ಗೌರವಿಸುವ ನಡದಾಡುವ ಗ್ರಂಥಾಲಯ ಎನಿಸಿಕೊಂಡಿದ್ದ ಡಾ: ಬಿ.ಆರ್.ಅಂಬೇಡ್ಕರ ಅವರ ಜೀವನ ಮತ್ತು ಸಾಧನೆಯನ್ನು ಜನರಿಗೆ ತಿಳಿಸಿ ಅವರಲ್ಲಿಯೂ ಆದರ್ಶವನ್ನು ಬೆಳೆಸುವ ಉದ್ದೇಶದಿಂದ ಜೀ ಕನ್ನಡ ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಪ್ರಸಾರ ಮಾಡುತ್ತಿದ್ದರೆ ಅದನ್ನು ನಿಲ್ಲಿಸುವಂತೆ ಬೆದರಿಕೆ ಹಾಕುವ ವಿಕೃತ ಮನಸ್ಸಿನವರು ಇಲ್ಲಿ ಇದ್ದಾರೆ.ಅಂತವರಿಗೆ ಎಚ್ಚರಿಕೆಯ ಸಂದೇಶ ನೀಡಲೆಂದು ಇಂದು ಮಹಾನಾಯಕ ಬ್ಯಾನರ್ ಹಾಕಿ ರಾಘವೇಂದ್ರ ಹುಣಸೂರವರಿಗೆ ಬೆಂಬಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ ಬಿರಾದಾರ್ ಹಣಮಂತ ಬೊಂಬಾಯಿ ಲಂಕೇಪ್ಪ ಕವಲಿ ಮಲ್ಲಣ್ಣ ಹುಬ್ಬಳ್ಳಿ ನಾಗಪ್ಪ ಮಾಸ್ಟರ್ ಹುಸೇನ್ ಭಾಷಾ ಗುತ್ತೇದಾರ್ ಹಣಮಂತ ಭದ್ರಾವತಿ ಪಿಡ್ಡಪ್ಪ ದೊರೆ ಭೀಮರಾಯ ಕುಂಬಾರ ನಿಂಗಣ್ಣ ಐಕೂರ್ ಸಿದ್ದು ಗುಡ್ಡಕಾಯಿ ಗೋಪಾಲ ಚಲುವಾದಿ ಮರೆಪ್ಪ ಬಡಿಗೇರ ಮಲ್ಲು ಚಲುವಾದಿ ಲಕ್ಷ್ಮಣ ಚಲುವಾದಿ ಅನೀಲ್ ಚಲುವಾದಿ ಸೇರಿದಂತೆ ಅನೇಕರಿದ್ದರು.