ಕಲಬುರಗಿ: ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗಾಗಿ ಕಳೆದ ವರ್ಷ ಘೋಷಣೆ ಮಾಡಿರುವ ಪ್ರಮುಖ ಘೋಷಣೆಯ ಬೇಡಿಕೆಗಳಿಗೆ ಕಾಲಮೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿವತಿಯಿಂದ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತೇಕವಾಗಿ ಭೇಟಿಯಾಗಿ ಕಳೆದ ವರ್ಷ ಘೋಷಣೆ ಮಾಡಿರುವ ಪ್ರಮುಖ ಅಂಶಗಳ ಬೇಡಿಕೆಗಳ ಈಡೇರಿಸುವಂತೆ ಸಮಿತಿಯ ನೇತೃತ್ವದಲ್ಲಿ ಒತ್ತಾಯಿಸಲಾಯಿತು.
371 (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತೇಕ ಸಚಿವಾಲಯ ಸ್ಥಾಪನೆ ಮಾಡುವುದು, 371 (ಜೆ) ಕಲಂ ತಿದ್ದುಪಡಿಯ ಅನುಷ್ಠಾನದ ನಿಯಮಗಳಲ್ಲಿ ಇರುವ ದೋಷಗಳ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳುವುದು, ಕಲ್ಯಾಣ ಕರ್ನಾಟಕ ಪ್ರದೇಶದ ೩೭೧ (ಜೆ) ಕಲಂಗೆ ಸಂಬಂಧಿಸಿದ ವಿಶೇಷ ಕೋಶ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದ್ದು, ಪ್ರಾದೇಶಿಕ ಕಛೇರಿ ಕಲಬುರಗಿಯಲ್ಲಿ ಸ್ಥಾಪನೆ ಮಾಡುವುದು., ಕಲ್ಯಾಣ ಕರ್ನಾಟಕದ ಇತಿಹಾಸ ಕಾಲಮಿತಿಯಲ್ಲಿ ರಚನೆಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವು ನೀಡುವುದು ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಧ್ಯಯಾನ ಪೀಠ ಸ್ಥಾಪನೆ ಮಾಡುವುದಾಗಿವೆ.
ಈ ಪ್ರಮುಖ ಬೇಡಿಕೆಗಳ ಬಗ್ಗೆ ಕಳೆದ ವರ್ಷ ತಾವು ಅಧೀಕೃತವಾಗಿ ಘೋಷಣೆ ಮಾಡಿರುವಂತೆ ಪ್ರವಾಹ ಮತ್ತು ಕೋವಿಡ -೧೯ ಕಾರಣಗಳಿಂದ ವಿಳಂಬವಾಗಿದೆ. ಇನ್ನು ಮುಂದೆ ಈ ಬೇಡಿಕೆಗಳ ಈಡೇರಿಕೆಯ ಬಗ್ಗೆ ಗಂಭಿರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಈಡೇರಿಸುವ ನಿಟ್ಟಿನಲ್ಲಿ ಕ್ರಮಜರುಗಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿರುವ ಬಗ್ಗೆ ಭರವಸೆ ನೀಡಿರುತ್ತಾರೆಂದು ಸಮಿತಿಯ ಅಧ್ಯಕ್ಷರು ಮತ್ತು ಮಾಜಿ ವಿಧಾನಪರಿಷತ ಸದಸ್ಯರಾದ ಶಶೀಲ ಜಿ.ನಮೋಶಿಯವರು ತಿಳಿಸಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ದಸ್ತಿ ಸೇರಿದಂತೆ, ಅಣ್ಣಾರಾವ ದುತ್ತರಗಾಂವ, ಮನೀಷಜಾಜು, ಶಿವರಾಜ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.