ಮಿಂಡಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ”

0
87

ಮಾಲೂರು: ತಾಲ್ಲೂಕಿನ ಶಿವಾರಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಂಡಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಚಂದ್ರುರವರು ಮಾತನಾಡಿ ಇಂದು ಮಿಂಡಹಳ್ಳಿ ಗ್ರಾಮದಲ್ಲಿ ಸರಳವಾಗಿ ವಿಶ್ವಕರ್ಮ ಜಯಂತಿಯನ್ನು ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಆಚರಿಸುತ್ತಿದ್ದೇವೆ, ಇತಿಹಾಸದಲ್ಲಿ ವಿಶ್ವಕರ್ಮ ಎಂದರೆ ಈ ಸೃಷ್ಟಿಯ ಬ್ರಹ್ಮಾಂಡದ ಸೃಷ್ಟಿಕರ್ತ ಅನ್ನುತ್ತಾರೆ, ಎಲ್ಲಾ ದೇವತೆಗಳ ಆಯುಧಗಳನ್ನು ರಕ್ಷಣೆ ಮಾಡಿರುವವರು, ಮತ್ತೆ ದ್ವಾರಕಾನಗರ, ಹಸ್ತಿನಾಪುರ ಪಟ್ಟಣ ರಕ್ಷಣೆ ಮಾಡಿರುವವರು ಎಂದು ನಾವು ಪುರಾಣಗಳಲ್ಲಿ ಓದಬಹುದು ಎಂದರು.

Contact Your\'s Advertisement; 9902492681

ಇಂದು ಈ ಗ್ರಾಮದಲ್ಲಿ ಎಲ್ಲಾ ಯುವಕರು ಸೇರಿ ವಿಶ್ವಕರ್ಮ ಜಯಂತಿ ಮಾಡುತ್ತಿರುವುದು ಖುಷಿಯ ವಿಷಯವಾಗಿದೆ. ಮುಖ್ಯವಾಗಿ  ಯುವಕರು ಯಾವುದೇ ರೀತಿಯ ದುಶ್ಚಟಗಳಿಗೆ ಒಳಗಾಗದೆ ವಿದ್ಯಾವಂತರಾಗಿ ,ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು, ಅದಕ್ಕಾಗಿ ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದರು.

ವಿಶ್ವಕರ್ಮದವರಿಗಾಗಿ ಕರ್ನಾಟಕ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಅಲ್ಲದೆ ಇದರಲ್ಲಿ “ಅರಿವು ಶೈಕ್ಷಣಿಕ ಸಾಲ” ಯೋಜನೆಯಿದ್ದು, ವಿದ್ಯಾಭ್ಯಾಸ ಮಾಡುವವರು ಸುಮಾರು 2 ಲಕ್ಷದ ವರೆಗೆ ಶೈಕ್ಷಣಿಕ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಸ್ವಂತ ಉದ್ಯೋಗ ಮಾಡುವವರಿಗೆ 50000 ರಿಂದ 60000ವರೆಗೆ ನೇರ ಸಾಲ ಸೌಲಭ್ಯ ಯೋಜನೆ,  ಸ್ವಾವಲಂಬನೆ ಯೋಜನೆ ಹಾಗೂ ಇನ್ನೂ ಅನೇಕ ಯೋಜನೆಗಳಿದ್ದು, ಎಲ್ಲವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡೈರಿ ಮುನಿರಾಜು, ರವೀಂದ್ರ ಎಂ ಉಪನ್ಯಾಸಕರು, ಚಂದ್ರು ಮಾಸ್ಟರ್, ನಟರಾಜ್, ನಾಗರಾಜ್ ಎಂ.ಎಲ್, ಲಕ್ಷ್ಮಿ ನಾರಾಯಣ ಚಾರಿ, ಶಿವಲಿಂಗಚಾರಿ, ಚಂದ್ರಚಾರಿ, ಬ್ರಹ್ಮ ಚಾರಿ, ಸುನಿಲ್ ಚಾರಿ, ನವೀನ್ ಚಾರಿ, ಮಿಥುನಚಾರಿ,ಶೇಖರಚಾರಿ, ಶಂಕರಚಾರಿ, ಶ್ರೀನಿವಾಸಚಾರಿ, ಗೌತಮ್ ಚಾರಿ, ಗಗನ್ ಚಾರಿ, ಅರುಣ್ ಕುಮಾರ್ ಎಂ, ಶ್ರೀಕಾಂತ್. ಡಿ, ಶೇಖರ್.ಎಂ.ಎಸ್ ಹಾಗೂ ಮಿಂಡಹಳ್ಳಿ ಗ್ರಾಮದ ವಿಶ್ವಕರ್ಮ ಕುಲಬಾಂಧವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here