ಸುರಪುರ: ರಾಜ್ಯದ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರೆ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.ನಗರದ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸುದ್ದಿಗೊರರೊಂದಿಗೆ ಮಾತನಾಡಿ,ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರೆ ಹೇಳಿದ್ದಾರೆ ಪೂರ್ಣ ಅವಧಿ ಯಡಿಯೂರಪ್ಪನವೆ ಮುಖ್ಯಮಂತ್ರಿ ಎಂದು ಹಾಗಾಗಿ ಮುಖ್ಯಮಂತ್ರಿಗಳ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಶ್ರೀರಾಮುಲು ಮತ್ತು ರಮೇಶ ಜಾರಕಿಹೊಳೆ ಮದ್ಯೆ ನಡೆದ ಉಪ ಮುಖ್ಯಮಂತ್ರಿ ಸ್ಥಾನದ ಪೈಪೋಟೊ ಕುರಿತು ಕೇಳಲಾದ ಪ್ರಶ್ನೆಗೆ ವಿವರಿಸಿ,ನಮ್ಮ ಎಸ್ಟಿ ಸಮುದಾಯಕ್ಕೆ ೭.೫ ಮಿಸಲಾತಿ ಪ್ರಮಾಣ ಹೆಚ್ಚಿಸ ಬೇಕೆಂಬುದು ನಮ್ಮ ಮುಖ್ಯ ಬೇಡಿಕೆ ಹಾಗಾಗಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಇಲ್ಲ,ಅಲ್ಲದೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ.ಈಗಾಗಲೆ ರಾಜ್ಯದಲ್ಲಿ ಕೊರೊನಾ ಹಾವಳಿ ಜೊತೆಗೆ ನೆರೆ ಹಾವಳಿಯಿಂದ ಜನರು ಸಂಕಷ್ಟದಲ್ಲಿರುವಾಗ ನಾವು ಜನರ ತೊಂದರೆ ನಿವಾರಿಸಲು ಚಿಂತಿಸುತ್ತಿದ್ದೇವೆ.ಆದರೆ ಸಚಿವ ಸ್ಥಾನದ ಬೇಡಿಕೆ ಇಲ್ಲ,ನನಗೆ ಸದ್ಯ ನೀಡಿದ ಜವಬ್ದಾರಿಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸುವೆ.ನನ್ನ ಕೆಲಸ ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವುದಾಗಿ ತಿಳಿಸಿದರು.ಅಲ್ಲದೆ ಯಾರೇ ಆಗಲಿ ಸಚಿವ ಸ್ಥಾನಕ್ಕೆ ಒತ್ತಡ ಹಾಕುವಂತವರಿಗೆ ಸಚಿವ ಸ್ಥಾನ ನೀಡದಂತೆ ಮನವಿ ಮಾಡುವುದಾಗಿ ತಿಳಿಸಿದರು.
ಇನ್ನು ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಮಾತನಾಡಿ,ಸುರಪುರ ನಗರಕ್ಕೆ ಮುಂದಿನ ೩೫ ವರ್ಷಗಳ ವರೆಗೆ ಕುಡಿಯುವ ನೀರಿನ ಅಭಾವ ಬಾರದಂತೆ ಯೋಜನೆ ರೂಪಿಸಿ ೨೪೦ ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ಪಡೆಯಲಾಗಿದೆ ಮಾತ್ರವಲ್ಲದೆ ಮುಂದೆ ಕಕ್ಕೇರಾ ಮತ್ತು ಹುಣಸಗಿಗು ಶಾಸ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ.ಜೊತೆಗೆ ಸದ್ಯ ಶಹಾಪುರ ಅಫಜಲಪುರ ಔರಾದ ಆಳಂದ ಕುಷ್ಟಗಿ ಸೇರಿದಂತೆ ರಾಜ್ಯದ ಅನೇಕ ಊರುಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದರು.ನಾನು ಕುಡಿಯುವ ನೀರು ಸರಬರಾಜು ಮತ್ತು ಒಳ ಚಂರಂಡಿ ಮಂಡಳಿ ಅಧ್ಯಕ್ಷನಾಗಿ ರಾಜ್ಯದಲ್ಲಿನ ೩೫೦ ಜನ ಇಂಜಿನಿಯರ್‌ಗಳೊಂದಿಗೆ ನಿತ್ಯವು ಒಂದು ತಾಸು ಸಂವಾದ ನಡೆಸಿ ನನ್ನ ಜವಬ್ದಾರಿಗೆ ನ್ಯಾಯ ಒದಗಿಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ನೆರೆ ಸಂದರ್ಭದಲ್ಲಿ ಬೆಳೆ ನಷ್ಟವಾದ ರೈತರಿಗೆ ಪರಿಹಾರ ದೊರೆಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ,ಪರಿಹಾರ ಹಣ ವಿತರಣೆಯಲ್ಲಿ ಗೋಲಮಾಲ್ ನಡೆಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿ ರೈತರಿಗೆ ಹಣ ಕೊಡಿಸುವುದಾಗಿ ತಿಳಿಸಿದರು.