ವಿದ್ಯಾರ್ಥಿಗಳ ಶಾಲಾ ಶುಲ್ಕ ಮನ್ನಾ ಮಾಡುವಂತೆ ಬಹುಜನ ಸಮಾಜ ಪಕ್ಷ ಆಗ್ರಹ

0
65

ಸುರಪುರ: ಈಗಾಗಲೆ ದೇಶಾದ್ಯಂತ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿದ್ದರಿಂದಾಗಿ ದೇಶದಲ್ಲಿನ ಸುಮಾರು ೧೮ ಕೋಟಿಯಷ್ಟು ಅಸಂಘಟಿತ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ.ಅವರೆಲ್ಲರ ನೆರವಿಗೆ ನಿಲ್ಲಬೇಕಾದ ಸರಕಾರ ನಿರ್ಲಕ್ಷ್ಯ ತೋರಿದೆ.ಈಗ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಶರಣಪ್ಪ ಹನ್ಸೂರ ಬೇಸರ ವ್ಯಕ್ತಪಡಿಸಿದರು.

ಬಿಎಸ್‌ಪಿ ಪಕ್ಷದ ವತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ರಾಜ್ಯದಲ್ಲಿನ ಎಲ್ಲಾ ಶಾಲಾ ವಿದ್ಯಾರ್ಥಿಗಳ ಪೋಷಕರು ಕೋವಿಡ್ ಲಾಕ್‌ಡೌನ್ ಕಾರಣದಿಂದ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ,ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಶುಲ್ಕ ಕಟ್ಟುವಂತೆ ಆದೇಶಿಸುತ್ತಿವೆ.

Contact Your\'s Advertisement; 9902492681

ಜನರ ಬಳಿ ಹಣವಿಲ್ಲದೆ ಮಕ್ಕಳ ಶುಲ್ಕ ಕಟ್ಟಲೊ ಎಷ್ಟೊ ಪೋಷಕರು ತಮ್ಮ ತಾಳಿಯನ್ನು ಒತ್ತೆಯಿಟ್ಟ ಘಟನೆಗಳು ನಡೆದಿವೆ.ಅಲ್ಲದೆ ಖಾಸಗಿ ಶಾಲೆಯ ಫೀಜು ಕಟ್ಟಲಾಗದೆ ಶಾಲೆ ಬಿಡಿಸಿದ ಮತ್ತು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಸೇರಿಸಿದ ಉದಾಹರಣೆಗಳಿವೆ.ಆದ್ದರಿಂದ ಸರಕಾರ ಕೂಡಲೆ ಖಾಸಗಿ ಮತ್ತು ಸರಕಾರಿ ಶಾಲೆಗಳ ಶುಲ್ಕ ರದ್ದು ಪಡಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪರಶುರಾಮ ದೊಡ್ಮನಿ ಜಟ್ಟಿಂಗರಾಯ ನಾಯಕ ಎಮ್.ಎಸ್.ಮೇಲಿನಮನಿ ನಬೀಸಾಬ್ ವಜ್ಜಲ್ ಹುಸೇನಸಾಬ ಹುಣಸಗಿ ಪರಶುರಾಮ ದೊಡ್ಮನಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here