ಸಿರವಾರ: ತಾಲೂಕಿನ ಬಹುದಿನಗಳ ವಿದ್ಯಾರ್ಥಿಗಳ ಕನಸು ಆಗಿದ್ದ SSLC ಸಪ್ಲಿಮೆಟರಿ ಪರೀಕ್ಷಾ ಕೆಂದ್ರ ಸಿರವಾರಕ್ಕೆ ನೀಡಬೇಕು ಎಂದು SFI ತಾಲೂಕ ಸಮಿತಿ ನೇತೃತ್ವದಲ್ಲಿ ಹೋರಾಟವನ್ನು ಮಾಡಿ ಸಂಬಂಧಿಸಿದ DDPI BEO ಮತ್ತು ತಹಶಿಲ್ದಾರರು ಸೇರಿ ಇತರರ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಧಿಕೃತ ಆದೇಶದ ಮೇರೆಗೆ ಸಿರವಾರ ಪಟ್ಟಣಕ್ಕೆ ಪೂರಕ ಪರೀಕ್ಷಾ ಕೇಂದ್ರವನ್ನ ನೀಡಿದ್ದಾರೆ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಪೋಷಕರು, ಸಂತಸದ ವ್ಯಕ್ತಪಡಿಸಿದರು.
SFI ಸಂಘಟನೆ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಸಿರವಾರದ ಮುಖ್ಯಗುರುಗಳಾದ ಸುರೇಶ (ಬಾಲಕರ ಪ್ರೌಢ ಶಾಲೆ ಸಿರವಾರ) ಮಂಜುಳಾ (ಬಾಲಕಿಯರ ಪ್ರೌಢ ಶಾಲೆ ಸಿರವಾರ) ಮಲ್ಲಪ್ಪ PWD ಮುಖ್ಯಗುರುಗಳು & ಪೋಷಕರು ಶುಭ ಹಾರೈಸಿ ಸಂಭ್ರಮಿಸಿದರು.
ಇನ್ನೂ ಇನ್ನೊಂದು ಬೇಡಿಕೆಯಾದ PUC ಸಪ್ಲಿಮೆಂಟರಿ ಕೇಂದ್ರವು ಸಿರವಾರಕ್ಕೆ ಮುಂದಿನ ಶೈಕ್ಷಣಿಕ ವರ್ಷದಿಂದ ತಾಲ್ಲೂಕಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುವ ಭರವಸೆಯಲ್ಲಿದ್ದೇವೆ. ಪಿ ಯು ಸಪ್ಲಿಮೆಂಟರಿ ಪರೀಕ್ಷಾ ಕೇಂದ್ರ ತಾಲೂಕಿಗೆ ಕೊಡುವವರೆಗೂ SFI ನ ಹೋರಾಟ ನಿರಂತರವಾಗಿ ನಡೆಯುತ್ತದೆ.
ಈ ಸಂದರ್ಭದಲ್ಲಿ DYFI ಮುಖಂಡ ಚಂದ್ರಶೇಖರ್ ಎಲ್ಲೇರಿ, SFI ತಾಲ್ಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ, ಕಾರ್ಯದರ್ಶಿ ಪ್ರವೀಣ್ ಕುಮಾರ,ಉಪಾಧ್ಯಕ್ಷ ಬಸವಲಿಂಗ ಖಜಾಂಚಿ ಸುದರ್ಶನ, ಪ್ರತಾಪ್, ದೇವರಾಜ್ ಸಿದ್ದಾರ್ಥ ಅರುಣಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.