ಜಿಟಿಜಿಟಿ ಮಳೆಯಲ್ಲಿಯೇ ಶಹಾಬಾದ ನಗರಸಭೆಯ ವಿವಿಧ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ-ವಿಜಯ ಜೋತ್ಸ್ನಾ

0
234

ಶಹಾಬಾದ:ನಗರದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಹಾಗೂ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಪರಿಶೀಲಿಸಿದರು.

ಅವರು ಶುಕ್ರವಾರ ಬೆಳಿಗ್ಗೆ ನಗರಕ್ಕೆ ಬೇಟಿ ನೀಡುವ ಸಂದರ್ಭದಲ್ಲಿ ನಗರದ ಸಮೀಪದ ಭಂಕೂರ ಗ್ರಾಮದ ಹೊರವಲಯದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮುಖ್ಯ ರಸ್ತೆಯಿಂದ ತ್ಯಾಜ್ಯ ವಿಲೇವಾರಿ ಘಟಕ್ಕೆ ಜಿಟಿಜಿಟಿ ಮಳೆಯಲ್ಲಿಯೇ ಜಿಲ್ಲಾಧಿಕಾರಿಗಳು ನಡೆದುಕೊಂಡು ಹೋದರು.

Contact Your\'s Advertisement; 9902492681

ನಂತರ ಘಟಕದ ವಿವಿಧ ಕಟ್ಟಡವನ್ನು ತಿರುಗಾಡಿ ವೀಕ್ಷಿಸಿದರು. ಈ ಘಟಕಕ್ಕೆ ತ್ಯಾಜ್ಯ ದಿನನಿತ್ಯ ಬರುತ್ತದೆಯಾ ಎಂದು ಕೇಳಿದರು.ಅಲ್ಲದೇ ತ್ಯಾಜ್ಯ ವಿಲೇವಾರಿ ಘಟಕದ ಯಂತ್ರಗಳನ್ನು ವೀಕ್ಷಿಸಿ, ತ್ಯಾಜ್ಯ ಬೇರ್ಪಡಿಸುವಿಕೆ ಕಾರ್ಯ ಇಲ್ಲಿ ನಡೆಯುತ್ತದೆಯೋ ಎಂದು ಕೇಳಿದಕ್ಕೆ, ದಿನಾಲೂ ತ್ಯಾಜ್ಯದಲ್ಲಿರುವ ಗಾಜು,ಲೋಹ, ಪ್ಲಾಸ್ಟಿಕ್ ಸೇರಿದಂತೆ ಇನ್ನೀತರ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ ಎಂದು ಪೌರಾಯುಕ್ತ ಕೆ.ಗುರಲಿಂಗಪ್ಪ ಹೇಳಿದರಲ್ಲದೇ, ಕಾಂಪೋಸ್ಟ ಗೊಬ್ಬರವನ್ನು ಇಲ್ಲಿ ತಯ್ಯಾರು ಮಾಡಲಾಗುತ್ತದೆ ಎಂದು ತಿಳಿಸಿದರು.ಅದಕ್ಕೆ ಜಿಲ್ಲಾಧಿಕಾರಿಗಳು ಕಾಂಪೋಸ್ಟ ಗೊಬ್ಬರವನ್ನು ಕಡಿಮೆ ದರದಲ್ಲಿ ರೈತರಿಗೆ ಸಿಗುವಂತೆ ಕ್ರಮಕೈಗೊಳ್ಳಿ ಎಂದು ಹೇಳಿದರು. ಅಧಿಕಾರಿಗಳಿಂದ ತ್ಯಾಜ್ಯ ವಿಲೇವಾರಿ ಘಟಕದ ಕೈಗೊಂಡ ಕಾಮಗಾರಿಯ ಕ್ರೀಯಾಯೋಜನೆಯನ್ನು ಪಡೆದು ಪರಿಶೀಲಿಸಿದರು.

ನಂತರ ಅಲ್ಲಿಂದ ತೆರಳಿ ನೇರವಾಗಿ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ನಗರೋತ್ಥಾನ ಯೋಜನೆಯಲ್ಲಿ ಸುಮಾರು ನಾಲ್ಕು ಕೋಟಿ ಹದಿನೇಳು ಲಕ್ಷ ರೂ. ಅನುದಾನದ ಪರಿಷ್ಕೃತ ಅಂದಾಜು ಪಟ್ಟಿ ಅನುಮೋದನೆಯ ಕಾಮಗಾರಿಯನ್ನು ವೀಕ್ಷಿಸಿ, ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಲು ಅಧಿಕಾರಿ ವರ್ಗದವರಿಗೆ ತಾಕೀತು ಮಾಡಿದರು.

ನಗರಸಭೆಯ ಕಾರ್ಯಾಲಯಕ್ಕೆ ಬಂದು ತೆರಿಗೆ ಸಂಗ್ರಹಣ ಕುರಿತು ಅಧಿಕಾರಿಗಳಿಂದ ದಾಖಲೆಗಳನ್ನು ಪಡೆದರು. ತೆರಿಗೆ ಸಂಗ್ರಹಣ ಬಹಳ ಕಡಿಮೆಯಾಗಿದೆ.ಇದಕ್ಕೆ ಕಾರಣವೇನು ಎಂದು ಕಂದಾಯ ಅಧಿಕಾರಿ ಸುನೀಲಕುಮಾರಗೆ ಕೇಳಿದರು. ಅದಕ್ಕೆ ತೆರಿಗೆ ಸಂಗ್ರಹಿಸಲು ಬಿಲ್ ಕಲೆಕ್ಟರಗಳು ಇಲ್ಲದ ಕಾರಣ ಹಾಗೂ ಕರೊನಾ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು. ತೆರಿಗೆ ಸಂಗ್ರಹಿಸಲು ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಿ .ಆದರೆ ತೆರಿಗೆ ಸಂಗ್ರಹಣೆ ಮಾಡಲೇಬೇಕು. ಅದಕ್ಕೆ ಕರೊನಾ ಸಬೂಬು ಹೇಳಬೇಡಿ. ನಗರದ ಅಭಿವೃದ್ಧಿ ಮಾಡಬೇಕಾದರೆ ತೆರಿಗೆ ಸಂಗ್ರಹವಾಗಲೇಬೇಕು.ಎಲ್ಲದಕ್ಕೂ ಸರಕಾರದ ಮೇಲೆ ಅವಲಂಭಿತರಾಗಬಾರದು ಎಂದು ತಾಕೀತು ಮಾಡಿದರು.ಆತ್ಮ ನಿರ್ಭರ ಯೋಜನೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಸಹಾಯ ಧನ ನೀಡಲಾಗಿದಿಯೇ ಎಂದು ಕೇಳಿದಕ್ಕೆ, ಅಧಿಕಾರಿ ರಘುನಾಥ ನರಸಾಳೆ ನೀಡಲಾಗಿದೆ ಎಂದು ಹೇಳಿದರು.

ಕಲಬುರಗಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ, ಕಾರ್ಯನಿರ್ವಾಹಕ ಅಭಿಯಂತರ ಶಿವನಗೌಡ ಪಾಟೀಲ,ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ, ಎಇಇ ಪುರುಷೋತ್ತಮ, ಅಣವೀರ ಇಂಗಿನಶೆಟ್ಟಿ, ಜೆಇ ಬಸವರಾಜ, ಲೋಕೋಪಯೋಗಿ ಇಲಾಖೆಯ ಜೆಇ ಜಗನ್ನಾಥ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ರಘುನಾಥ ನರಸಾಳೆ ಮತ್ತು ನಗರಸಭೆಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here