ಜೇವರ್ಗಿ: ತಾಲೂಕಿನ ನೆದಲಗಿ ಗ್ರಾಮ ಪಂಚಾಯತಿಯಲ್ಲಿ ಬಿಡುಗಡೆಯಾದ ಮನೆಗಳಿಗೆ ಜಿಪಿಎಸ್ ಮಾಡಲು ಅಧಿಕಾರಿ ಲಂಚದ ಬೇಡಿಕೆ ಇಡುತ್ತಿರುವುದನ್ನು ವಿರೋಧಿಸಿ, ಅಧಿಕಾರಿಗೆೆ ಅಮಾನತುಗೊಳಿಸಬೇಕೇಂದು ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಬಿ ಎಸ್ ಪಿ ತಾಲೂಕ ಕಾರ್ಯದರ್ಶಿಯಾದ ಮಲ್ಲು ನೆದಲಗಿ ಅವರು ಮಾತನಾಡಿ ನೆದಲಾಗಿ ಗ್ರಾಮ ಪಂಚಾಯತಿಯಲ್ಲಿ ಬಿಡುಗಡೆಯಾದ ಮನೆಗಳಿಗೆ ಜಿಪಿಎಸ್ ಮಾಡಲು ಗ್ರಾಮ ಲೆಕ್ಕಾಧಿಕಾರಿ ಸಾವಿರದಿಂದ ಎರಡು ಸಾವಿರ ರೂಪಾಯಿ ಹಣ ಪಡೆದುಕೊಂಡಿರುತ್ತಾರೆ ಮತ್ತು 2018 -19 ಹಾಗೂ 2019 -20 ಮತ್ತು 2020- 21 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿಯಲ್ಲಿ ಸರಕಾರಿ ಯೋಜನೆಗಳಾದ ಹಾಗೂ ಎಂ. ಜಿ. ಎನ್ .ಆರ್. ಇ .ಜಿ. ಅಡಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟ ಹಾಗೂ ಬೋಗಸ್ ಕಾಮಗಾರಿ ಮಾಡಿ ಮನಬಂದಂತೆ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.
ಪ್ರತಿಯೊಂದು ಕಾಮಗಾರಿಗಳಲ್ಲಿ ಪ್ರತಿಶತ ದಂತೆ ಹಣ ಪಡೆದುಕೊಂಡು ಕಾಮಗಾರಿಗಳನ್ನು ನೀಡುತ್ತಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ನಾಲಾ ಉಳೆತ್ತುವುದು, ನಮ್ಮ ಹೊಲ ನಮ್ಮ ರಸ್ತೆ, ಬದು ನಿರ್ಮಾಣ, ಸಿಸಿ ರಸ್ತೆ ಎಲ್ಲಾ ಕಾಮಗಾರಿಗಳು ಕೇವಲ ಲಿಖಿತ ರೂಪದಲ್ಲಿ ಮಾತ್ರ ಇವೆ ಗ್ರಾಮ ಅಭಿವೃದ್ಧಿ ಅಧಿಕಾರಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಜೈ ಕರ್ನಾಟಕ ತಾಲೂಕಾ ಘಟಕದ ಉಪಾಧ್ಯಕ್ಷರಾದ ಸತೀಶ್ ಜಾಗಿರ್ದಾರ ಅವರು ಮಾತನಾಡಿ ನೇದಲಗಿ ಗ್ರಾಮ ಪಂಚಾಯತಿಯಲ್ಲಿ 14ನೇ ಹಣಕಾಸು ಯೋಜನೆ ಹಾಗೂ ಅಂಗವಿಕಲರ ಅನುದಾನದ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ, ತನಿಖೆ ನಡೆಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗೀರದಾರ ಆಗ್ರಹಿಸಿದರು.
ನಂತರ ಜೇವರ್ಗಿ ಸಹಾಯಕ ನಿರ್ದೇಶಕರಾದ ಅವರು ನೇದಲಗಿ ಗ್ರಾಮ ಪಂಚಾಯಿತಿಗೆ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿಯ ಕಾರ್ಯಗಳಿಗೆ ಹಣ ನೀಡಬೇಡಿ ಹಾಗೂ ಪಿ ಡಿ ಓ ಅವರ ತಪ್ಪು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಸಜ್ಜನ್ ಭರವಸೆ ನೀಡಿದರು.