ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ SFI ಮನವಿ

0
26

ಜಾಲಹಳ್ಳಿ: ಭಾರತ ವಿದ್ಯಾರ್ಥಿ ಫೆಡರೇಶನ್ ( SFI) ಜಾಲಹಳ್ಳಿ ವಲಯ ಸಮಿತಿ ವತಿಯಿಂದ ಜಾಲಹಳ್ಳಿ ಗ್ರಾಮಕ್ಕೆ ಬಾಲಕಿಯರ ವಸತಿ ನಿಲಯ, ಹೆಚ್ಚುವರಿ ಕೊಠಡಿಗಳು ಸೇರಿ ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿ ಗೆ ಒತ್ತಾಯಿಸಿ ಶಾಸಕರಾದ ಶಿವನಗೌಡ ನಾಯಕರಿಗೆ ಮನವಿ ಸಲ್ಲಿಸಲಾಯಿತು.

ದೇವದುರ್ಗ ತಾಲೂಕು ಸೇರಿ ಜಾಲಹಳ್ಳಿ ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಂದಿಗೂ ಈ ಭಾಗದ ಶಾಲಾ ಕಾಲೇಜು ಮತ್ತು ಹಾಸ್ಟೆಲ್ ಗಳಿಗೆ ಸರಿಯಾದ ಮೂಲಭೂತ ಸೌಕರ್ಯ, ಕೊಠಡಿ ಸೇರಿ ಸಿಬ್ಬಂದಿ ಇಲ್ಲವಾಗಿದೆ. ಇದಕ್ಕೆ ಜಾಲಹಳ್ಳಿ ಯೂ ಹೊರತಲ್ಲ ಈಗಿರುವ ಸರ್ಕಾರಿ ಬಾಲಕೀಯ ಪ್ರೌಢಶಾಲೆ ( ಕನ್ಯಾ ಶಾಲೆ) ಮತ್ತು ಬಾಲಕರ ವಸತಿ ನಿಲಯ ಕಟ್ಟಡಗಳು ಸಂಪೂರ್ಣ ಶಿಥಿಲವ್ಯಸ್ಥೆ ತಲುಪಿ ಸೋರುತ್ತಿವೆ.

Contact Your\'s Advertisement; 9902492681

ಹಾಗಾಗಿ ಅವುಗಳನ್ನು  ಸರಿಪಡಿಸಬೇಕು ಹಾಗೂ ಈ ಭಾಗಕ್ಕೆ ಒಂದೆ ಒಂದು ಬಾಲಕಿಯರ ವಸತಿ ನಿಲಯ ಇಲ್ಲ ಇದರಿಂದ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಬಲವಾದ ಪೆಟ್ಟು ಬೀಳುತ್ತಿದೆ ಅದಕ್ಕೆ ಬಾಲಕಿಯರ ವಸತಿ ಶಾಲೆಯನ್ನು ಮಂಜೂರು ಮಾಡಿಸಬೇಕು ಹಾಗೂ ಶಾಲಾ  – ಕಾಲೇಜು ಸೇರಿ ಹಾಸ್ಟೆಲ್ ಗಳಲ್ಲಿ ಸಿಬ್ಬಂದಿ ಗಳ ಕೊರತೆ ಇರುತ್ತದೆ ಈ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಕೂಡಲೇ ತಾವುಗಳು ಈ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸಿಬೇಕು ಹಾಗೂ ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕೆಂದು ದೇವದುರ್ಗ ಶಾಸಕರಾದ ಶಿವನಗೌಡ ನಾಯಕರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ SFI ದೇವದುರ್ಗ ತಾಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ಜಾಲಹಳ್ಳಿ ವಲಯ ಘಟಕದ ಅಧ್ಯಕ್ಷ ಅಮರೇಶ ನಾಯಕ, ಕಾರ್ಯದರ್ಶಿ ರಾಜು, ಮುಖಂಡರಾದ ಶರೀಫ್, ರಮೇಶ ಡಿ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here