ಸುರಪುರ: ಶಿಬಾರಬಂಡಿ ಗ್ರಾಮವು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ,ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಖಾನಾಪುರ ಎಸ್.ಹೆಚ್ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಶಿಬಾರಬಂಡಿ ಗ್ರಾಮದಲ್ಲಿನ ಜನರಿಗೆ ಕುಡಿಯುವ ನೀರಿಲ್ಲ ಸಿಸಿ ರಸ್ತೆಯಿಲ್ಲ ವಿದ್ಯೂತ್ ದೀಪಗಳಿಲ್ಲ ಶೌಚಾಲಯಗಳಿಲ್ಲ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಜನರು ಬೇಸತ್ತಿದ್ದಾರೆ.ಕುಡಿಯುವ ನೀರಿನಾಗಾಗಿ ಕಿಲೋ ಮೀಟರ್‌ಗಟ್ಟಲೆ ಹೋಗಬೇಕಾದ ಪರಸ್ಥಿತಿ ಇದೆ.ಆದ್ದರಿಂದ ಕೂಡಲೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಇಲ್ಲವಾದಲ್ಲಿ ಒಂದು ವಾರದ ನಂತರ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ನಂತರ ಪಂಚಾಯಿತಿ ಸಿಬ್ಬಂದಿಯ ಮೂಲಕ ಅಭೀವೃದ್ದಿ ಅಧಿಕಾರಿಗಳಿಗೆ ಬರೆದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ಶರಣು ಬೈರಿಮರಡಿ ನಗರ ಕಾರ್ಯಾಧ್ಯಕ್ಷ ಯಲ್ಲಪ್ಪ ಕಲ್ಲೋಡಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗೋಗಿಕರ್ ರವಿ ಹುಲಕಲ್ ಅಂಬ್ರೇಶ ಪೂಜಾರಿ ವೆಂಕಟೇಶ ರಾಮಬಾಣ ಬಸವರಾಜ ರಂಗನಾಥ ರಾಮಬಾಣ ವೆಂಕೋಬ ಪೂಜಾರಿ ಚಂದಪ್ಪ ರಾಮಬಾಣ ಮೌನೇಶ ಇತರರಿದ್ದರು.