ರೈತರಿಗೆ ಪಿಂಚಣಿ, ಆರೋಗ್ಯ, ಶಿಕ್ಷಣ, ವಸತಿ, ಜೀವನ ಭದ್ರತೆ ನೀಡಿದ್ದು ಕೃಷಿ ಪದ್ದತಿ: ಎಂ.ಶಶಿಧರ್

0
87

ಕಲಬುರಗಿ: ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್.ಕೆ.ಎಸ್.) ನ ರಾಜ್ಯ ಸಮಿತಿಯಿಂದ ’ಕೃಷಿ ನೀತಿಗಳು ಮತ್ತು ರೈತರು, ಸರಣಿ ಸಂವಾದ ಭಾಗ ೨ ರ ಸಂವಾದ ೨ ರಲ್ಲಿ ಸಮಾಜವಾದದಲ್ಲಿ ಕೃಷಿ ಪದ್ಧತಿ ಎಂಬ ವಿಷಯದ ಕುರಿತು ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಎಮ್. ಶಶಿಧರ್ ರವರು ಸಂವಾದಕರಾಗಿ ಫೆಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡುತ್ತಾ ಅವರು – ಯೋರೋಪಿನ ಒಂದು ರೋಗಿಷ್ಠ ರಾಷ್ಟ್ರವಾಗಿದ್ದ ರಷ್ಯಾ ಕೇಲವೇ ವರ್ಷಗಳಲ್ಲಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಕಾರಣ ಅಲ್ಲಿ ಮಹಾನ್ ಕ್ರಾಂತಿಕಾರಿ ಲೆನಿನ್ ರವರ ನೇತೃತ್ವದಲ್ಲಿ ರೈತ ಕಾರ್ಮಿಕರು ಅಪಾರ ತ್ಯಾಗ ಬಲಿದಾನಗಳಿಂದ ಕಟ್ಟಿದಂತಹ ಸಮಾಜವಾದಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಕೃಷಿಗೆ ಪ್ರಾದನ್ಯತೆ ನೀಡಲಾಯಿತು. ಕೃಷಿಯನ್ನು ರಾಷ್ಟ್ರಿಕರಣಗೋಳಿಸಿದರು. ಸಾಮುಹಿಕ ಕೃಷಿ ಪದ್ದತಿಯನ್ನು ಮತ್ತು ರಾಜ್ಯ ಕೃಷಿಯನ್ನು ಜಾರಿಗೆ ತಂದರು. ಸಾಮೂಹಿಕ ಕೃಷಿ ಪದ್ದತಿಯಲ್ಲಿ ರೃತರಿಗೆ ಸಹಕಾರ ಸಂಘಟನೆಗಳ ಮೂಲಕ ರೈತರಿಗೆ ಉಚಿತವಾಗಿ ಬೀಜ, ಗೊಬ್ಬರ, ಕೀಟನಾಶಕಗಳನ್ನು ನೀಡಲಾಗುತ್ತಿತು. ಮತ್ತು ಕೃಷಿಯನ್ನು ಹೆಚ್ಚು ಯಾಂತ್ರೀಕರಣಗೊಳಿಸಿ ಅವರು ಯಾವುದೇ ಬೆಳೆಗೆ ಅದರ ಖರ್ಚಿನ ಆಧಾರದ ಮೇಲೆ ಸರಿಯಾದ ಬೆಲೆಯನ್ನು ನಿಗದಿಪಡಿಸಿದ್ದರು.

Contact Your\'s Advertisement; 9902492681

ನಮ್ಮ ದೇಶದಲ್ಲಿ ಇರುವಂತೆ ಬೆಳೆಗೆ ಬೆಲೆ ಸಿಗದೆ ತರಕಾರಿಗಳನ್ನು ಬೀದಿಗೆ ಚೆಲ್ಲುವ ಪರಸ್ಥಿತಿ ಅಲ್ಲಿ ಉಂಟಾಗಲು ಬಿಡಲಿಲ್ಲ. ಕೃಷಿಯು ಹಾಗೂ ರೈತರ ಜೀವನ ಭದ್ರತೆಯು ಸಂಪೂರ್ಣವಾಗಿ ಅಲ್ಲಿನ ಸರ್ಕಾರವೇ ತೆಗೆದುಕೊಂಡಿತ್ತು. ಸಮಾಜವಾದಿ ರಾಜ್ಯ ಕೃಷಿಯಲ್ಲಿ ಕೆಲಸಮಾಡುವ ರೈತರಿಗೆ ಕಾರ್ಮಿಕರಂತೆ ದಿನದ ೮ ಅವಧಿಗೆ ಕೆಲಸ ಮಾಡಬೇಕಿತ್ತು, ಅವರಿಗೆ ವಸತಿ, ಶಿಕ್ಷಣ, ಆರೋಗ್ಯ, ಮನರಂಜನೆ ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರಕಾರ ಒದಗಿಸಿತ್ತು. ಬರಗಾಲ ನೆರೆಹಾವಳಿ ಬಂದಾಗ ನಮ್ಮ ದೇಶದಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸರ್ಕಾರವು ಇಂತಹಸಂಕಷ್ಟದಲ್ಲಿಯೂ ತಮ್ಮ ಹೊಲಸು ರಾಜಕೀಯವನ್ನು ಮಾಡಲು ಹಿಂದೆ ಸರಿಯುವುದಿಲ್ಲ. ಅಂತಿಮವಾಗಿ ಲಾಭಬಡುಕ ಬಂಡವಾಳಿಗರ ಸೇವೆ ಸಲ್ಲಿಸಲು ಟೊಂಕಕಟ್ಟಿ ನಿಂತಿರುತ್ತಾರೆ. ಆದರೆ, ಸಮಾಜವಾದಿ ರಷ್ಯಾದಲ್ಲಿ ನೆರೆ, ಬರ ಬಂದಾಗ ಸರಕಾರ ರೈತರ ಜೊತೆಗೆ ನಿಂತು ಅವರಿಗೆ ಜೀವನ ಭದ್ರತೆಯನ್ನು ಒದಗಿಸಿತ್ತು. ಅಲ್ಲದೇ ಅವರಿಗೆ ಎಲ್ಲಾ ರೀತಿಯ ತೆರಿಗೆಯನ್ನು ಮತ್ತು ಸಾಲವನ್ನು ಮನ್ನಾ ಮಾಡಿ, ಅವರಿಗೆ ಬದುಕು ಕಟ್ಟಲು ನೆರವೆಗೆ ನಿಲ್ಲುತ್ತದೆ. ಅಷ್ಟೇ ಅಲ್ಲದೇ ಕಾರ್ಮಿಕರಂತೆ, ರೈತರಿಗೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದ ವಿಶ್ವದ ಮೊದಲ ದೇಶ ಸಮಾಜವಾದಿ ರಷ್ಯಾ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಪುರುಷರಿಗೆ ೬೦ ವರ್ಷಕ್ಕೆ, ಮಹಿಳೆಯರಿಗೆ ೫೫ ವರ್ಷಕ್ಕೆ ನಿವೃತ್ತಿಯನ್ನು ನೀಡಿದ ಕೀರ್ತಿ ಸಮಾಜವಾದಿ ರಷ್ಯಾಕ್ಕೆ ಸಲ್ಲುತ್ತದೆ.

ಸಮಾಜವಾದಿ ವ್ಯವಸ್ಥೆ ಅಸ್ಥಿತ್ವದಲ್ಲಿದ್ದ ಸಂದರ್ಭದಲ್ಲಿ ನಮ್ಮ ದೇಶದ ಪ್ರಸಿದ್ಧ ವ್ಯಕ್ತಿಗಳು ಆ ದೇಶಕ್ಕೆ ಭೇಟಿ ನೀಡಿದ ರವೀಂದ್ರನಾಥ ಟ್ಯಾಗೋರ, ನಾಡೋಜ ಪಾಟೀಲ ಪುಟ್ಟಪ್ಪ ಮತ್ತು ಬೀ.ಚೀ. ಅವರು ಅಲ್ಲಿನ ಕೃಷಿ ಕೇಂದ್ರಗಳನ್ನು ನೋಡಿ, ಒಂದು ಸಮಾಜವಾದಿ ರಾಷ್ಟ್ರವು ರೈತರಿಗೆ ನೀಡಿದ ಜೀವನ ಭದ್ರತೆಯನ್ನು ಕಂಡು ಕೊಂಡಾಡಿದ್ದಾರೆ. ಆ ವ್ಯವಸ್ಥೆಯಲ್ಲಿ ಕೃಷಿ ಕೇಂದ್ರಗಳು ರೈತರಿಗೆ ತರಬೇತಿ ನೀಡುವ ಕೇಂದ್ರಗಳಾಗಿದ್ದು, ರೈತರಿಗೆ ನೇರ ಸಂಪರ್ಕದಲ್ಲಿದ್ದವು. ಆದರೆ ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧ ವ್ಯವಸ್ಥೆ ಇದೆ. ಹೀಗಾಗಿ ಆ ಮಹನೀಯರೆಲ್ಲಾ ಸಮಾಜವಾದಿ ರಷ್ಯಾದ ಕೃಷಿ ಪದ್ಧತಿಯ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ ಎಂದರು.

ಈ ಎಲ್ಲಾ ದೃಷ್ಠಿಯಿಂದ ನಮ್ಮ ದೇಶದ ರೈತರು ಇದನ್ನು ಅರ್ಥ ಮಾಡಿಕೊಂಡು, ನಮ್ಮ ದೇಶದಲ್ಲಿ ಸಮಾಜವಾದಿ ಕೃಷಿ ಪದ್ಧತಿಗಾಗಿ ರೈತರು ನಮ್ಮ ದೇಶದ ರೈತ ಕಾರ್ಮಿಕರ ನೈಜ ಶತ್ರುಗಳಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಹಾಗೂ ಅದರ ಸೇವೆಗಾಗಿ ಇರುವ ಸರ್ಕಾರಗಳು ಮತ್ತು ರಾಜಕೀಯವನ್ನು ಸೋಲಿಸಲು ಸಿದ್ದರಾಗಬೇಕು. ಸಮಾಜವಾದಿ ವ್ಯವಸ್ಥೆಯೇ ನಮಗೆ ಸರಿಯಾದ ಪರ್ಯಾಯ. ಆದ್ದರಿಂದ ರೈತರು ಶೋಷಣೆಯ ವಿರುದ್ಧ ಬಲಿಷ್ಠ ಹೋರಾಟಗಳನ್ನು ಕಟ್ಟಿ ಸಮಾಜವಾದಿ ಕ್ರಾಂತಿಗಾಗಿಯ ಪೂರಕವಾದ ಚಳುವಳಿಗಳನ್ನು ಬೆಳೆಸಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ನಿರೂಪಣಿಯನ್ನು ರಾಜ್ಯ ಸಮಿತಿಯ ಸದಸ್ಯರಾದ ಹಾಗೂ ಯಾದಗಿರಿ ಜಿಲ್ಲೆಯ ಅಧ್ಯಕ್ಷರಾದ ಕಾಮ್ರೇಡ್ ಶರಣಗೌಡ ಗೂಗಲ್ ರವರು ನಡೆಸಿಕೂಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here