ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಸವನಹಳ್ಳಿಯಲ್ಲಿ ಜಾತಿನಿಂದನೆಗೆ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಆರೋಪ ನಡೆಯುತ್ತಿದೆ ಎಂದು ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಗ್ರಾಮಸ್ಥರ ಸಭೆ ನಡೆಸಲಾಯಿತು.
ಸಂಬಂಧಿಸಿದಂತೆ ಸಮತ ಸೈನಿಕ ದಳ ಹಾಗೂ ಆರ್ ಪಿ ಐ ವತಿಯಿಂದ ಜಿಲ್ಲಾಡಳಿತದ ಗಮನ ಸೆಳೆದ ಪರಿಣಾಮ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಬಸವನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಶಾಂತಿ ಸೌಹಾರ್ದತೆಯಿಂದ ಇರಬೇಕು. ನೊಂದ ಕುಟುಂಬಕ್ಕೆ ಎಲ್ಲಾ ಸಹಕಾರ ಅಗತ್ಯ.
ನರಸಿಂಹಯ್ಯ ಕುಟುಂಬಕ್ಕೆ ತಾಲೂಕು ಆಡಳಿತ ರಕ್ಷಣೆ ಒದಗಿಸಲಾಗುತ್ತದೆ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ.ಜಾತಿ ಕುಟುಂಬದ ಮೇಲೆ ಜಾತಿ ನಿಂದನೆ ಹಾಗೂ ದೌರ್ಜನ್ಯ ಮಾಡಿದ ಹಿನ್ನೆಲೆಯ ದೂರಿನಂತೆ ಗ್ರಾಮದ ರಾಜಾರೆಡ್ಡಿ ಎಂಬುವರನ್ನು ಗುರುವಾರ ಬಂಧಿಸಲಾಗಿದ್ದು ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ತಾಲೂಕು ತಹಶೀಲ್ದಾರ್ ಎಸ್ ಎಂ ಶ್ರೀನಿವಾಸ್ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಸೋಮ ಶೇಖರ್. ಡಿವೈಎಸ್ಪಿ ನಾರಾಯಣಸ್ವಾಮಿ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಾಲಜಿ. ಎಸ್ಎಸ್ ಡಿ ಜಿಲ್ಲಾಧ್ಯಕ್ಷರಾದ ಅಂಬರೀಶ್. ಆರ್ ಪಿ ಐ ಜಿಲ್ಲಾಧ್ಯಕ್ಷರಾದ ಕುಪೇಂದ್ರ. ಒಎಸ್ ಆನಂದ್. ಎಸ್ಎಸ್ ಡಿನ ಪಾಪಣ್ಣ ಉನಕಿಲಿ ವೆಂಕಟರಾಮ್. ನರಸಿಂಹ. ಪಿಎಸ್ಐ ಲಕ್ಷ್ಮೀ ನರಸಿಂಹಯ್ಯ. ಇತರರು ಹಾಗೂ ನೊಂದ ಕುಟುಂಬ ಮತ್ತು ಗ್ರಾಮಸ್ಥರು ಹಾಜರಿದ್ದರು.