- ಡಾ.ಅಶೋಕ್ ದೊಡ್ಮನಿ, ಕಲಬುರಗಿ
ಬೆಂಗಳೂರು: ಜನರಿಗೆ ನ್ಶೂಸ್ 24*7 ಅಂದ್ರೆ ಏನು ಅಂತಾನೆ ಗೊತ್ತಿಲ್ಲದ ಸಮಯದಲ್ಲಿ Tv9 ನ್ಶೂಸ್ ಚಾನೆಲ್ ಅನ್ನು ಸತತ 12 ವರ್ಷಗಳ ಕಾಲ ಕಟ್ಟಿˌ ಸಾಧನೆಯ ತುತ್ತ ತುದಿಗೆ ತೆಗೆದುಕೊಂಡು ಹೋಗಿ ನಂತರ ಅದರಿಂದ ಹೊರಬಂದು ಕಟ್ಟಿದ ಸಂಸ್ಥೆಯೇ ನ್ಶೂಸ್ ಫಸ್ಟ್. Tv9 ಸಂಸ್ಥೆಯನ್ನು ಕಟ್ಟಿದ್ದ ಬಹುತೇಕ ಮಾಸ್ಟರ್ ಮೈಂಡ್ ಗಳು ಎನ್.ರವಿಕುಮಾರ್ ಮತ್ತು ಮಾರುತಿ ಎಸ್.ಎಚ್. Tv9 ಸಂಸ್ಥೆಯಿಂದ ಹೊರಬರುವಾಗ ಒಬ್ಬರೇ ಬರಲಿಲ್ಲ. ತಮ್ಮ ಜೊತೆಗಿದ್ದ ಸೋಮಣ್ಣ ಮಾಚಿಮಾಡ್ˌ ಸಿದ್ದೇಶ ಸರ್ˌ ಮಧು ಸರ್ˌ ಅಂಕಪ್ಪಗೌಡˌ ವಿದ್ಶಾಶ್ರೀˌ ಅನಂತˌ ಬಸವರಾಜ ಸೇರಿ ಬಹುತೇಕರನ್ನು ಕರೆದುಕೊಂಡು ಬಂದ್ರು. ಇವ್ರು ಕಟ್ಟಿ ಬ್ರ್ಶಾಂಡ್ ಮಾಡಿದ ಹೆಸರಿನ ಮೇಲೆ ಈಗ Tv9 ಓಡ್ತಿರೋದು. ಹೊಸದೇನು ಅಲ್ಲಿಲ್ಲ.
ಒಂದು ಸುದ್ದಿ ಸಂಸ್ಥೆ ಕಟ್ಟಬೇಕಾದರೆ ಸಾಮಾನ್ಶ ಮಾತಲ್ಲ. ಅದರಲ್ಲೂ ಇಬ್ಬರು ಸಾಮಾನ್ಶ ವ್ಶಕ್ತಿಗಳು ಇಂತಹ ಬ್ರಹತ್ ಸಂಸ್ಥೆ ಹುಟ್ಟು ಹಾಕಲು ಹೊರಟಿದ್ದಾರೆ ಅಂದಾಗ ಕನ್ನಡದ ಕೆಲ ನ್ಶೂಸ್ ಚಾನೆಲ್ ಗಳಿಗೆ ನಡುಕವೇ ಹುಟ್ಟಿತು.
ನ್ಶೂಸ್ ಫಸ್ಟ್ ಬಗ್ಗೆ ಕುಹಕದ ಮಾತು ಶುರು ಮಾಡಿದ್ರು. ಹೊಸ ಚಾನೆಲ್ ಕಟ್ಟುವುದು ಅವರ ಕಡೆಯಿಂದ ಸಾಧ್ಶವೇ ಇಲ್ಲ ಅಂದ್ರು. ಮುಗಿ ಬಿದ್ರು. ಆರೋಪಿಸಿದ್ರು. ಕೆಟ್ಟದಾಗಿ ಬರೆಯಿಸಿದ್ರು. ಎಲ್ಲವನ್ನು ಸಮಾಧಾನದಿಂದಲೇ ಸ್ವೀಕರಿಸಿದ ಎನ್.ರವಿಕುಮಾರ್ˌ ಮಾರುತಿ ಎಸ್.ಎಚ್ ಟೀಂˌ ಬ್ರಹತ್ ದೊಡ್ಡದಾದ ಫಸ್ಟ್ ನ್ಶೂಸ್ ಚಾನೆಲ್ ಇವತ್ತು ಕಾರ್ಯಾರಂಭ ಮಾಡಿದೆ.
ಸಂಸ್ಥೆಯು ಸುಸಜ್ಜಿತ ಕಟ್ಟಡˌ 300 ಜನಕ್ಕೂ ಹೆಚ್ಚು ಸಿಬ್ಬಂದಿˌ ಲೈವ್ ಸ್ಟೂಡಿಯೋˌ ಹೊಸ ತಂತ್ರಜ್ಞಾನವುಳ್ಳ ಪಿಸಿಆರ್ˌ ಎಂಸಿಆರ್ˌ ವಿಶಾಲವಾದ ಕಾನ್ಫರೆನ್ಸ್ ಹಾಲ್ˌ ದೊಡ್ಡದಾದ ಡೆಸ್ಕ್ ವಿಭಾಗˌ ಅಚ್ಚುಕಟ್ಟಾದ ಎಡಿಟಿಂಗ್ ಸೆಕ್ಶನ್ˌ ಚುರುಕಾದ ಬ್ರೇಕಿಂಗ್ ನ್ಶೂಸ್ ಟೀಂˌ ಡಿಜಿಟಲ್ ಕ್ಶಾಮೆರಾಗಳುˌ ವಾಯ್ಸ್ ಓವರ್ ರೂಂˌ ಪ್ರತ್ಶೇಕವಾದ ಇನ್ ಪುಟ್ˌ ಔಟ್ ಪುಟ್ˌ ಉತ್ತಮ ಲೈಬ್ರರಿˌ ಪ್ರತ್ಶೇಕವಾದ ಸಂದರ್ಶನ ರೂಂ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿದೆ.
ಹೊಸದಾಗಿ ಪ್ರಾರಂಭವಾದ ಚಾನೆಲ್ ಉದ್ಘಾಟನೆಗಾಗಿ ಎನ್.ರವಿಕುಮಾರ್ ಮತ್ತು ಮಾರುತಿ ಎಸ್.ಎಚ್ ಅವರಿಗಾಗಿ ತಮ್ಮ ಜೀವನವನ್ನೇ ತ್ಶಾಗ ಮಾಡಿದ ಮಹಾನ್ ತ್ಶಾಗಿಗಳಾದ ಅವರವರ ಪತ್ನಿˌ ಮಕ್ಕಳು ಬಂದಿದ್ದರು. ತಮ್ಮವರ ಸಾಧನೆಯನ್ನು ಇಡೀ ಕುಟುಂಬ ನೋಡಿ ಸಂತಸ ಪಟ್ರು. ಸಾಧನೆ ಅಂದ್ರೆ ಇದು. ಸಾಧಕರು ಅಂದ್ರೆ ಹೇಗಿರ್ಬೇಕು ಅನ್ನುವುದು ಆ ಕುಟುಂಬ ಕಣ್ತುಂಬಿಕೊಂಡಿತು.
ಜಗತ್ತು ಮಲಗಿದ ಮೇಲೆ ಮಲಗುವುದು ಇವ್ರಿಬ್ರ ಜಾಯಮಾನ. ವಿಶ್ವದಲ್ಲಿ ನಡೆಯುವ ವಿಶೇಷಗಳುˌ ಘಟನೆಗಳುˌ ಸಭೆˌ ಬದಲಾವಣೆಗಳನ್ನು ಕ್ಷಣ ಮಾತ್ರದಲ್ಲಿ ಗೊತ್ತು ಮಾಡಿಕೊಳ್ಳುವ ಕಲೆ ಇವರಿಗೆ ಗೊತ್ತು.
ಐತಿಹಾಸಿಕ ದಿನಗಳುˌ ರಾಜಕೀಯˌ ಸಿನಿಮಾˌ ಕ್ರಿಕೆಟ್ˌ ಕ್ರೈಂˌ ತಾಪಮಾನˌ ವೈಮಾನಿಕˌ ತಂತ್ರಜ್ಞಾನ ಹಲವು ವಿಭಿನ್ನವಾದ ಜಗತ್ತಿನ ಮಾಹಿತಿ ವಿವರಣೆಯ ಸಮೇತ ಡೆಸ್ಕಿನ ಮುಂದಿಡುವ ಇವ್ರಿಬ್ಬರೂ ನಿಜವಾದ ಜ್ಞಾನದ ಗಣಿ.
ಪ್ರಸಿದ್ದ ನಟರುˌ ಬಹುದೊಡ್ಡ ರಾಜಕಾರಣಿಗಳುˌ ಖ್ಶಾತ ಉದ್ದಿಮೆದಾರರು ಆಫೀಸಿಗೆ ಸಂದರ್ಶನಕ್ಕೆ ಅಂತಾ ಬಂದಾಗ ಎನ್.ರವಿಕುಮಾರ್ˌ ಮಾರುತಿಯವರಿಗೆ ಗೊತ್ತು ಪರಿಚಯವೇ ಹಿಡಿಯೋದಿಲ್ಲ. ಕಾರಣ ಯಾರನ್ನು ವ್ಶಯಕ್ತಿಕವಾಗಿ ಪರಿಚಯ ಮಾಡಿಕೊಳ್ಳದೆ ಇರುವುದೇ ಇವರು ಪ್ರಾಮಾಣಿಕವಾಗಿ ಸುದ್ದಿ ಮಾಡಲು ಬಹುದೊಡ್ಡ ಕಾರಣ.
ಈ ಟೀಂ ಭೇಟಿ ಮಾಡಲೆಂದು ಮತ್ತು ಹೊಸ ಆಫೀಸು ನೋಡಲೇಬೇಕೆಂಬ ಹಂಬಲದಿಂದ ಕಲಬುರಗಿಯಿಂದ ಬಂದಿದ್ದೆ. ಕಣ್ತುಂಬಿಕೊಂಡೆ. ಅವರ ಕುಟುಂಭ ವರ್ಗವನ್ನು ಭೇಟಿ ಮಾಡಿದ ಸಂತಸ ನನ್ನಲ್ಲಿದೆ.
ರಾಜ್ಶದಲ್ಲಿ ಸಾವಿರಾರು ಪತ್ರಿಕೋದ್ಶಮ ವಿದ್ಶಾರ್ಥಿಗಳಿಗೆ ಹಾಗೂ ನಮಗೆ ಕೆಲಸವನ್ನು ಕಲಿಸಿˌ ಪ್ರತಿಭೆಗಳಿಗೆ ಸೂಕ್ತವಾದ ಸ್ಥಾನವನ್ನು ನೀಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಇಂದು ನಾಡಿಗೆ ಬಹುದೊಡ್ಡ ಕಾಣಿಕೆಯಂತೆ ನ್ಶೂಸ್ ಫಸ್ಟ್ ನೀಡಿದ ನಿಮ್ಮಂತ ಜ್ಞಾನವಂತ ಪತ್ರಕರ್ತರು ಸಮಾಜಕ್ಕೆ ಬರಲಿˌ ನಿಮ್ಮ ಪ್ರಾಮಾಣಿಕತೆಯನ್ನು ಈ ನಾಡಿನ ಜನತೆ ಗುರುತಿಸಲಿ ಎಂದು ಹಾರೈಸುವೆ.