ಮನುಷ್ಯನ ಮಾನಸೀಕತೆ ಬದಲಿಸುವ ಶಕ್ತಿ ಸಂಗೀತಕ್ಕಿದೆ: ಭೃಂಗಿಮಠ

0
97

ಕಲಬುರಗಿ: ಮನುಷ್ಯನ ಮಾನಸೀಕತೆ ಬದಲಿಸುವ ಶಕ್ತಿ ಸಂಗೀತಕ್ಕಿದೆ ಎಂದು ಖ್ಯಾತ ಹೈಕೋರ್ಟ ನ್ಯಾಯವಾದಿ,ಸಾಹಿತಿ ಭೃಂಗಿಮಠ ಅವರು ಸಂಗೀತ ಪ್ರತಿಭೆಗಳಿಗೆ ಉಪದೇಶ ಮಾಡಿದ್ದಾರೆ.

ಅವರು ಕಲಬುರಗಿ ನಗರದ ಅಮರಪ್ರೀಯ ಶೈಕ್ಷಿಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಕಲಬುರಗಿಯ ಪ್ರಶಾಂತ ನಗರದಲ್ಲಿ ಏರ್ಪಡಿದ್ದ ಸಂಗೀತ ಸ್ವರ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಇತಿಹಾಸದಲ್ಲಿ ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲಾ ಪ್ರಾಚೀನ ಕಾಲದಲ್ಲಿ ಸಂಗೀತ ಸ್ವರದಿಂದ ಆಲಿಸುತ್ತಿದ್ದರು, ಆದರೆ ಇಂದು ಕೆಲವರು ಸಂಗೀತದ ಸ್ವರವನ್ನು ಮರೆತು ಗಾಯನ ಮಾಡುತ್ತಿದ್ದಾರೆ, ಇದು ಸಂಗೀತಕ್ಕೆ ಭದ್ರ ಬುನಾದಿಯಲ್ಲಾ, ಸಂಗೀತದಲ್ಲಿ ಆಸಕ್ತಿ ಇರುವ ಪ್ರತಿಭೆಗಳು ನಿಯಮ ಬದ್ದ ಸ್ವರದಿಂದ ಸಂಗೀತವನ್ನು ಕಲಿತರೆ ಒಳ್ಳೆಯ ಉಜ್ವಲ ಭವಿಷ್ಯ ಮುಂದೆ ಬರಲಿದೆ ಎಂದು ಭೃಂಗಿಮಠ ಹೇಳಿದರು.

Contact Your\'s Advertisement; 9902492681

ಅಮರಪ್ರೀಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಅಮರಪ್ರೀಯ ಹಿರೇಮಠ ಅವರು ಮಾತನಾಡಿ ಆಧುನಿಕ ಸಂಗೀತದಲ್ಲಿ ಸ್ವರಗಳು ತಾಳ ತಪ್ಪುತ್ತಿವೆ, ಹಳೆಯ ಕಾಲದ ಸಂಗೀತದಲ್ಲಿ ಮನುಷ್ಯನ ಜೀವನಕ್ಕೆ ಮಾಧರಿಯ ಸಂಗೀತ ರಚೆನೆಯಾಗುತ್ತಿತ್ತು, ಆದರಿಂದು ಸಂಗೀತದಲ್ಲಿ ಜೀವನಾಧಾರಿತ,ನೀತಿ ಹಾಡುಗಳು ಮರೆಯಾಗುತ್ತಿವೆ, ಸಂಗೀತದಲ್ಲಿ ಸ್ವರ ಲಯ, ರಾಗ ಸಂಯೋಜನೆ,ಭಾವಗಳನ್ನು ಒಳಗೊಂಡ ಸಂಗೀತದ ಹಾಡುಗಳು ಮನುಕುಲಕ್ಕೆ ಅಗತ್ಯ ಎಂದ ಅವರು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ ಪ್ರತಿಭೆಗಳು ಶ್ರಧ್ದೇ, ಭಕ್ತಿಯನ್ನಿಟ್ಟು ಸಂಗೀತ ಅಬ್ಯಾಸ ಮಾಡಿದರೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಹುದೆಂದು ಸಲಹೆ ನೀಡಿದರು.

ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ರಾಜು ಎಮ್ ಹಿರೇಮಠ ಅವರು ಮಾತನಾಡಿ ಅಮರಪ್ರೀಯ ಹಿರೇಮಠ ಅವರು ಸಂಗೀತಕ್ಕೆ ಮರೆಯದ ಮಾಣಿಕ್ಯದಂತೆ, ಹಿಂತಹ ಸಂಗೀತ ನಿರ್ಧೆಶಕರು ನಮ್ಮ ಕಲ್ಯಾಣ ಕರ್ನಾಟಕದಲ್ಲಿದ್ದಾರೆಂದರೆ ಅದು ನಮ್ಮ ಸಂಗೀತ ಪ್ರತಿಭೆಗಳ ಪುಣ್ಯ, ಅಮರ ಪ್ರೀಯರವರು ತಮ್ಮ ಜೀವನದುದ್ದಕ್ಕು ಬಡ ಸಂಗೀತ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿದ್ದು, ಸುಮಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಕೀರ್ತಿ ಅಮರಪ್ರೀಯ ಹಿರೇಮಠ ಅವರಿಗೆ ಸಲ್ಲುತ್ತದೆ, ಹಿಂದುಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತದ ಪರಂಪರೆಯನ್ನು ಒಳಗೊಂಡಂತಹ ಹಾಡುಗಳಿಗೆ ಸಂಗೀತ ನಿರ್ಧೇಶನ ಮಾಡಿರುವ ಕೀರ್ತಿ ನಮಗೆ ಹೆಮ್ಮೆಯಾಗಿದೆ ಎಂದು ರಾಜು ಎಮ್ ಹಿರೇಮಠ ಹೇಳಿದರು.

ವೀರು ಸ್ವಾಮಿ ನರೋಣಾ ಅವರು ಮಾತನಾಡಿ ಮನುಷ್ಯನ ಆರೋಗ್ಯ ಸುಧಾರಿಸುವ ಶಕ್ತಿ ಸಂಗೀತಕ್ಕಿದೆ. ಪ್ರತಿಭಾನ್ವಿತರ ಸಂಗೀತ ಕೆಳುತ್ತಾ ಹೋದಂತೆ ಸಮಯ ಕಳೆದಿದ್ದು ತಿಳಿಯುವುದಿಲ್ಲಾ. ಮನುಷ್ಯನ ಕೆಟ್ಟ ಮನಸ್ಥಿತಿಯನ್ನು ಬದಲಿಸುವ ಶಕ್ತಿ ಆ ದೇವರು ಸಂಗೀತಕ್ಕೆ ನೀಡಿದ್ದಾನೆ, ಮಾನಸೀಕವಾಗಿ ನೊಂದ ಮನುಷ್ಯರಿಗೆ ಸಂಗೀತತ ಮೂಲಕ ಚೈತನ್ಯ ತುಂಬುಬೇಕು, ನೊಂದವರನ್ನು ಸಂಗೀತ ಕ್ಷೇತ್ರದತ್ತ ಒಲವು ಬರುವಂತೆ ಸಂಗೀತವನ್ನು ಸ್ವರಬದ್ದವಾಗಿ, ರಾಗಬದ್ದವಾಗಿ ಸಂಗೀತಗಾರರು ನೋಂದವರಿಗೆ ಸಂಗೀತ ಉಣಬಡಿಸಬೇಕೆಂದು ತಿಳಿಸಿದರು.

ಮಹಾಲಕ್ಷ್ಮೀ ಪಾಟೀಲ,ವೈಷ್ಣವಿ ಹಿರೇಮಠ, ವಿಜಯಕ್ಷ್ಮಿ ಹಿರೇಮಠ, ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು, ಸುಮಾರು ಐದು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಭೃಂಗಿಮಠ ಅವರು ರಚಿಸಿರುವ ದೇಶಭಕ್ತಿ, ಭಾವಗೀತೆಗಳಿಗೆ ಅಮರ ಪ್ರೀಯ ಅವರು ಸ್ಥಳದಲ್ಲಿಯೇ ರಾಗ ಸಂಯೋಜನೆ ಮಾಡಿ ಹಾಡಿದ್ದು ವಿಶೇಷ ವಿಶಿಷ್ಟವಾಗಿತ್ತು.

ಕಾರ್ಯಕ್ರಮದಲ್ಲಿ ದೇಶಭಕ್ತರ ದೇಶಭಕ್ತಿಗೀತೆ, ಶರಣರ ವಚನ, ಸಂತರ, ದಾಸರ ಮತ್ತು ಗಿಗಿ ಪದಗಳ ಹಾಡುವ ಮುಖಾಂತರ ಸಂಗೀತಗಾರರು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಮನಮೊಹಕವಾಗಿತ್ತು, ದಯಾನಂದ ಹಿರೇಮಠ ವೀರೇಶ ಪಂಗರಗಿ, ಮಹೇಶ ಸ್ವಾಮಿ, ಚನ್ನು, ಬಸವಣ್ಣಪ್ಪ ಮುಂತಾದವರು ಪಾಲಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here