ಬೆಂಕಿ ನೀರು ಯಾವುದಕ್ಕು ಹೆದರದೆ ಸೇವೆ ಮಾಡುವುದು ಅಗ್ನಿಶಾಮಕ ದಳ

0
74

ಸುರಪುರ: ಅಗ್ನಿ ಶಾಮಕ ದಳದ ಠಾಣಾಧಿಕಾರಿಗಳಾಗಿ ತಮ್ಮ ಸಾರ್ಥಕ ಸೇವೆ ಸಲ್ಲಿಸಿದ ಬೋಳಬಂಡಿಯವರ ಕಾರ್ಯಕ್ಷಮತೆ ಹೆಮ್ಮೆ ಪಡುವಂತದ್ದಾಗಿತ್ತು ಎಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಡಿ.ಎಸ್.ಒ ಹನುಮೆಗೌಡ ಪಾಟೀಲ ಮಾತನಾಡಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬೋಳಬಂಡಿ ದಂಪತಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಬೋಳಬಂಡಿಯವರು ತಮ್ಮ ದಕ್ಷ ಕರ್ತವ್ಯದಿಂದಾಗಿ ರಾಷ್ಟ್ರಪತಿಗಳ ಶ್ಲಾಘನಿಯ ಸೇವಾ ಪ್ರಶಸ್ತಿ,ಮುಖ್ಯಮಂತ್ರಿಗಳ ಚಿನ್ನದ ಪದಕ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಬಂದಿರುವುದು ಅವರ ಸೇವೆಗೆ ಸಾಕ್ಷಿ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹ ರಕ್ಷಕ ದಳದ ಕಮಾಂಡರ್ ಹಾಗು ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕೃತ ಯಲ್ಲಪ್ಪ ಹುಲಕಲ್ ಮಾತನಾಡಿ,ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕಾರ್ಯ ಶ್ಲಾಘನಿಯವಾದುದ್ದು,ಬೆಂಕಿ ಮತ್ತು ನೀರು,ಅಲ್ಲದೆ ಯಾವುದೆ ತುರ್ತು ಪರಸ್ಥಿತಿಗಳಾದ ನೆರೆಯಂತಹ ಸಂದರ್ಭದಲ್ಲು ಯಾವುದಕ್ಕೆ ಹೆದರದೆ ಬೆಂಕಿ ನೀರಿನೊಂದಿಗೆ ಜೀವದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.ಬೇರೆ ಎಲ್ಲಾ ಇಲಾಖೆಗಳ ಸೇವೆಗಿಂತ ಅಗ್ನಿಶಾಮಕ ಇಲಾಖೆಯ ಸೇವೆ ತುಂಬಾ ಅಪಾಯಕಾರಿಯಾದರು ಅದನ್ನು ಬೋಳಬಂಡಿಯವರು ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ಗೃಹ ರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್ ವೆಂಕಟೇಶ ಸುರಪುರ,ಅಗ್ನಿಶಾಮಕ ಠಾಣಾಧಿಕಾರಿ ಸಣ್ಣ ಮಲ್ಲಯ್ಯ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಬೋಳಬಂಡಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ಶಂಕರ ಚವ್ಹಾಣ,ಭೀಮರಾಯ,ಫಿರೋಜ್ ಪಟೇಲ, ಮಲ್ಲಿಕಾರ್ಜುನ, ಆಶೋಕ, ದೇವಿಂದ್ರಪ್ಪ,ನಾಗರಾಜ,ಸುಭಾಸ್ ನಾಗರಾಳ,ಬಸವರಾಜ ಪೀರಾಪುರ,ಮಾನಯ್ಯ ನಾಯಕ, ಚಂದ್ರಕಾಂತ ಮ್ಯಾಕಲ್,ಅಲ್ಲಾವುದ್ದೀನ್,ಕಾಶೀನಾಥ,ಮಲ್ಲಪ್ಪ ಕರಡಿ,ಸುರೇಶ ಗುಡ್ಡಕಾಯಿ,ಪರಶುರಾಮ ಪೂಜಾರಿ,ಬಸಪ್ಪ ಬಿಜಾಸಪೂರ,ರಂಗಯ್ಯ,ಮಾಳಪ್ಪ ಪ್ರಧಾನಿ,ರಂಗಪ್ಪ ದೇವಿಕೇರಾ,ಆದಪ್ಪ ಕೆಂಗುರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here