ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಒದಗಿಸಲು ಆಗ್ರಹಿಸಿ ಪ್ರತಿಭಟನೆ

0
115

ಕಲಬುರಗಿ: ರಾಜ್ಯದ ಅತಿಥಿ ಉಪನ್ಯಾಸಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಆನ್‌ಲೈನ್ ಪ್ರತಿಭಟನೆ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ. ಅಷ್ಟೇ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೂ ಮನವಿ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಜಗಪ್ಪ ತಳವಾರ ತಿಳಿಸಿದ್ದಾರೆ.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು, ವಿಧಾನ ಪರಿಷತ್ತಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರ ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ವೇತನವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಘೋಷಿಸಿದ್ದಾರೆ.

Contact Your\'s Advertisement; 9902492681

ಆದರೆ ಉದ್ಯೋಗ ಭದ್ರತೆ ಪ್ರಮುಖ ಬೇಡಿಕೆಯಾಗಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ  ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಮತ್ತು ಯಾವುದೇ ಕಾರಣಕ್ಕೂ ಸೇವೆಯಿಂದ ಕೈಬಿಡಬಾರದು, ಬಾಕಿ ಇರುವ ವೇತನವನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು. ಲಾಕ್‌ಡೌನ್ ಅವಧಿಯನ್ನು ಕೆಲಸದ ಅವಧಿಯೆಂದು ಪರಿಗಣಿಸಬೇಕು ಎಂದು ಸಮಿತಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಮಿತಿಯ ಜಿಲ್ಲಾ ಸಂಯೋಜಕರಾದ ನಿಂಗಣ್ಣ ಜಂಬಗಿ, ಜಗನ್ನಾಥ.ಎಸ್.ಎಚ್, ಭೀಮಾಶಂಕರ ಪಾಣೆಗಾಂವ, ಮಲ್ಲಿನಾಥ ಹುಂಡೆಕಲ್, ಹಾಗೂ ಅತಿಥಿ ಉಪನ್ಯಾಸಕರಾದ ಡಾ ಶರಣಬಸಪ್ಪ ಮೈಸಲಗಿ, ಡಾ ವಿಶ್ವನಾಥ ಬೆಲ್ಲದ, ಡಾ ರುಕ್ಮೀಣಿ, ಡಾ ಪ್ರಕಾಶ ತಳವಾರ, ಡಾ ಶಾಂತಪ್ಪ ರಾಠೋಡ, ಡಾ ಮಲ್ಲಿಕಾರ್ಜುನ ಹೂಗಾರ, ಅರುಣಾ ತಂಬಾಕಿ, ಡಾ ಮಾಣಿಕಪ್ಪ, ಡಾ ವಿಜಯಕುಮಾರ ಮೂರ್ತಿ, ಡಾ ನಾಗೇಂದ್ರ ನಂದಾ, ಅಣಿವೀರಪ್ಪ ಬೋಳೆವಾಡ, ರಾಜಪ್ಪ ರಟಕಲ್, ಚಂದ್ರಶೇಖರ್ ಅಕ್ಕರಕಿ, ಡಾ.ಜ್ಯೋತಿ ರದ್ದೇವಾಡಿ, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here