ಕಲಬುರಗಿ: ಸೇಡಂನ ದಾಸಧೇನು ಟ್ರಸ್ಟ್ ಕೊಡಮಾಡುವ ದಾಸಧೇನು ಪ್ರಶಸ್ತಿಗೆ ರಾಯಚೂರು ಡಾ.ಶೇಷಗಿರಿದಾಸ್ ಆಯ್ಕೆಯಾಗಿದ್ದಾರೆ ಎಂದು ದಾಸಧೇನು ಟ್ರಸ್ಟ್ ಅಧ್ಯಕ್ಷ ಡಾ ವಾಸುದೇವ ಅಗ್ನಿಹೋತ್ರಿ ತಿಳಿಸಿದ್ದಾರೆ.
ಬೆಂಗಳೂರಿನ ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್ ಅಧ್ಯಕ್ಷರಾದ ಶೇಷಗಿರಿ ದಾಸ್ ಅವರು ಸಂಪಾದಿಸಿ ಪ್ರಕಟಿಸಿದ ಅಸ್ಕಿಹಾಳ ಗೋವಿಂದದಾಸರ ಜೀವನಸಾಧನೆ ಕುರಿತ ಪುಸ್ತಕ ಪ್ರಕಟಿಸಿದ್ದಾರೆ. ಶೇಷಗಿರಿದಾಸ್ ಅವರು ಹರಿದಾಸ ಪರಂಪರೆಯ ಪ್ರತಿನಿಧಿ ಗಳಾಗಿದ್ದಾರೆ. ಭಾರತದ ಹಲವು ರಾಜ್ಯಗಳಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. ದಾಸರ ಸಾವಿರಾರು ಹಾಡುಗಳ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.
ದಾಸವಾಣಿ, ಸುಗಮ ಸಂಗೀತ, ಮರಾಠಿ ಅಭಂಗವಾಣಿ, ಜಾನಪದ, ವಚನಗಾಯನದ ಉತ್ತಮ ಗಾಯಕರಾಗಿದ್ದಾರೆ. ದಾಸ ಸಾಹಿತ್ಯದ ಅಧ್ಯಯನ, ಅನುಸಂಧಾನ ಮತ್ತು ಆಲಾಪನ ಮಾರ್ಗದ ಸಾಧನೆಯಲ್ಲಿ ತೊಡಗಿದ ಡಾ.ಶೇಷಗಿರಿದಾಸ್ ಅವರಿಗೆ ೨೧ ಸಾವಿರ ರೂ.ಗಳ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಅಕ್ಟೋಬರ್ ತಿಂಗಳಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ವಾಸುದೇವ ಅಗ್ನಿಹೋತ್ರಿ ತಿಳಿಸಿದ್ದಾರೆ.