ಪೌರಕಾರ್ಮಿಕರ ಸೇವೆ ವೈದ್ಯರಿಗಿಂತಲೂ ಮಿಗಿಲಾದುದು-ಡಾ.ಶ್ರೀಶೈಲ ನಾಗರಾಳ

0
99

ಶಹಾಬಾದ:ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಸೇವೆ ವೈದ್ಯರಿಗಿಂತಲೂ ಮಿಗಿಲಾದುದು ಎಂದು ಚಿಂಚೋಳಿ ಹೆಚಕೆಇ ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಶೈಲ ನಾಗರಾಳ ಹೇಳಿದರು.

ಅವರು ಬುಧವಾರ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯಿಂದ ಆಯೋಜಿಸಲಾದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Contact Your\'s Advertisement; 9902492681

ನಗರ ಹಾಗೂ ನಗರದ ಸಾರ್ವಜನಿಕರು ನಮ್ಮವರು ಎಂಬ ಭಾವನೆಯಿಂದ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ನಿಜವಾಗಲೂ ಕಾಯಕಯೋಗಿಗಳಾಗಿದ್ದಾರೆ.ಕಾರಣ ನಮ್ಮ ಮನೆಯ ಹೊಲಸನ್ನು ತೆಗೆಯಲು ಹಿಂದೇಟು ಹಾಕುವ ನಾವುಗಳಾದರೆ, ನಗರದ ಸಾರ್ವಜನಿಕರ ಮಾಡಿದ ಹೊಲಸನ್ನು ತೆಗೆಯುವ ಮೂಲಕ ನಮ್ಮ ಆರೋಗ್ಯ ಕಾಪಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಪೌರಕಾರ್ಮಿಕರು ದೇವರಿಗೆ ಸಮಾನ ಎಂದು ಹೇಳಿದರು.

ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಮೇಶ ಭಟ್ ಮಾತನಾಡಿ, ತಮ್ಮ ಆರೋಗ್ಯವನ್ನು ಲೆಕ್ಕಿಸದೇ ನಿತ್ಯ ಕೆಟ್ಟ ವಾತವಾವರಣದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಶ್ರಮ ಮೆಚ್ಚಲೇಬೇಕು. ಕೊರೊನಾ ವಾರಿಯರ್ಸ್ ಆಗಿ ಸತತವಾಗಿ ಶ್ರಮಿಸಿದವರಲ್ಲಿ ಪೌರಕಾರ್ಮಿಕರೇ ಮೊದಲಿಗರು.ಅವರಿಗೆ ಸರಕಾರದಿಂದ ಸವಲತ್ತುಗಳು ಸಿಗಲಿ.ಅವರ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲಲ್ಲಿ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ,ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕೈಗೊಂಡರೆ ಅಧಿಕಾರಿಗಳಿಗೂ ಒಳ್ಳೆಯ ಪ್ರಶಂಸೆ ನಿಮ್ಮಿಂದ ಬರುತ್ತದೆ. ಒಂದು ವೇಳೆ ಕೆಲಸ ಮಾಡದೇ ಹೋದರೇ ನಿಮ್ಮಿಂದಲೇ ಕೆಟ್ಟ ಹೆಸರು ಬರುತ್ತದೆ.ಆದ್ದರಿಂದ ಪೌರಕಾರ್ಮಿಕರು  ಉತ್ತಮ ಕೆಲಸ ಮಾಡುವತ್ತ ಗಮನಹರಿಸಬೇಕು.ಅಲ್ಲದೇ ತಮ್ಮ ಆರೋಗ್ಯವನ್ನು ಕಾಪಡಿಕೊಳ್ಳುವತ್ತ ಗಮನಹರಿಸಬೇಕು. ಕುಡಿತಕ್ಕೆ ಒಳಗಾಗಬೇಡಿ.ಕುಡಿತ ನಿಮಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದರು. ನಗರಸಭೆಯಿಂದಲೇ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಲಾಗುತ್ತಿದ್ದು, ದಾಖಲೆ ಪತ್ರಗಳನ್ನು ಒದಗಿಸಬೇಕು.ಅಲ್ಲದೇ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ 3500 ರೂ. ಪ್ರೋತ್ಸಾಹ ಧನ ಅವರ ಖಾತೆಗೆ ಹಾಕಲಾಗುತ್ತಿದೆ.ಅಲ್ಲದೇ ನಿತ್ಯ ಉಪಹಾರದ ವ್ಯವಸ್ಥೆಯೂ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಘುವೀರಸಿಂಗ ಠಾಕೂರ,ಮಲ್ಲಿನಾಥ ಪಾಟೀಲ, ವಾಸುದೇ ಚವ್ಹಾಣ ಮಾತನಾಡಿದರು. ಎಇಇ ಪುರುಷೋತ್ತಮ, ಕಂದಾಯ ಅಧಿಕಾರಿ ಸುನೀಲಕುಮಾರ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ರಾಜೇಶ, ಶರಣು, ಜೆಇ ಬಸವರಾಜ, ಶಂಕರ, ಸುರೇಶ ಇತರರು ಇದ್ದರು.ಇದೇ ಸಂದರ್ಭದಲ್ಲಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಸಾಬಣ್ಣ ಸುಂಗಲಕರ್ ನಿರೂಪಿಸಿದರು, ರಘುನಾಥ ನರಸಾಳೆ ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here