ಕಲಬುರಗಿ: ಆರೋಗ್ಯಕರ ಬದುಕನ್ನು ನಡೆಸಲು ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾದ ಚೇತನ್ ಗೋನಾಯಕ ರವರು ಅಭಿಪ್ರಾಯ ಪಟ್ಟರು.
ತಾಲೂಕಿನ ಶ್ರೀ ನಿವಾಸ ಸರಡಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಹೀಂದ್ರ ಫೈನಾನ್ಸ್ ಮತ್ತು ಮಹೀಂದ್ರ ರೂರಲ್ ಹೌಸಿಂಗ್ ಫೈನಾನ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾವೆಲ್ಲಾ ವೃಕ್ಷ ಪ್ರೇಮಿಗಳಾಗಿ ಪರಿಸರ ರಕ್ಷಿಸಬೇಕು, ಜನರಲ್ಲಿ ಹಸಿರಿನ ಮಹತ್ವದ ಕುರಿತು ಜಾಗೃತಿ ಮೂಡಿಬೇಕು, ಮಹೀಂದ್ರ ಫೈನಾನ್ಸ್ ಅವರ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಿವರಾಜ್ ಕೊಳಕುರ್, ಸಂಜುಕುಮಾರ್ ನಿಲಂಗೆ, ವೀರಶೆಟ್ಟಿ, ಶ್ರವಣಕುಮಾರ ಔರದ್, ಅಮುಲ್ ಕಟಾಂಬಲೆ ಹಾಗು ಗ್ರಾಮದ ಮುಖಂಡರಾದ ಬಸ್ಸಯ್ಯ ಮಠಪತಿ, ಸಿದ್ದಯ್ಯ ಸ್ವಾಮಿ ಮೂಲಿಮನಿ, ಸಂಗಣ್ಣಗೌಡ ಸಿದಗುಂಡ್, ಅರುಣ್ ಗೋನಾಯಕ್, ನಾಗರಾಜ್ ಶ್ರೀಮನಿ, ರಶೀದ್ ಮುಲ್ಲಾ, ಶಿವಾನಂದ್ ಕಿಳ್ಳಿ ಮತ್ತು ಕಾರ್ಯಕ್ರಮ ಸಂಚಾಲಕರಾಗಿ ಶರಣು ಗೋನಾಯಕ್ ನೆರವೇರಿಸಿಕೊಟ್ಟರು.