ರಾಯಚೂರು: ಬೆಡ್ಡದ ಮೇಲಿರುವ ಐತಿಹಾಸಕ ಪಂಚ ಪಹಾಡ್ (ವೀಕ್ಷಣೆ ಗೋಪುರ) ಮಳೆಗೆ ಬಿದ್ದಿದ್ದು ಹಾನಿಗೆ ಒಳಗಾಗಿದ್ದು, ಇಂದು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ನಗರದ ಬಸ್ ನಿಲ್ದಾಣ ಹತ್ತಿರವಿರುವ ಪಂಚ್ ಪಹಾಡ್, ಅಂದಿನ ಮಹಾರಾಜರು ನಗರ ವೀಕ್ಷಣೆಗಾಗಿ ಬೆಟ್ಟಡ ಮೇಲೆ ನಿರ್ಮಿಸಿದ್ದರು ಎಂದು ಕರೆಯಲಾಗುತ್ತಿದ್ದು, ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿತ್ತಿದ್ದ ಮಳೆಗೆ ಗೊಡೆಗಳು ಬಿದ್ದು ಹಾನಿಗೆ ಒಳಗಾಗಿವೆ.
ಬೆಟ್ಟದ ಮೇಲಿರುವ ಈ ಗೋಪುರ ಬಿದ್ದರಿಂದ ಅಪಾರ ಹಾನಿ ಉಂಟಾಗುವ ಆತಂಕ ಸೃಷ್ಟಿಯಾಗಿದೆ. ಸಾರ್ವಜನಿಕರು ಗೋಪುರ ದುರಸ್ತಿಗೆ ಮನವಿ ಮಾಡಿದ್ದು, ಎಚ್ಚೆತ್ತುಕೊಂಡು ಜಿಲ್ಲಾಡಳಿತ ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಜನರು ಹೋಗದಂತೆ ಬಂದೋಬಸ್ತು ಕಲ್ಪಿಸಲು ಆದೇಶಿದೆ ಎನ್ನಲಾಗಿದೆ.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಇಂದು ಪಂಚ ಪಹಾಡ್ ಸ್ಥಳಕ್ಕೆ ಭೇಟಿ ನೀಡಿ ಪೋಟೋಗಳು ತೆಗೆದು ಕೊಂಡು ಪರಿಶೀಲನೆ ನಡೆಸಿ, ಸ್ಥಳದಲ್ಲಿ ನಿಯೋಜನೆ ಗೊಂಡ ಸೆಕ್ಯುರಿಟಿ ಗಾರ್ಡ್ ನಿಂದ ಈ ಕುರಿತು ಮಾಹಿತಿ ಪಡೆದರು.
ವರದಿ: ಮುತ್ತಣ್ಣ ರಾಯಚೂರು