ಕೋವಿಡ್ 4.8 ಸಾವಿರ ಕೋಟಿ ವೆಚ್ಚ: ತುರ್ತು ವೆಚ್ಚಕ್ಕಾಗಿ 500 ಕೋಟಿಗೆ ಹೆಚ್ಚಳ:  ಜೆ.ಸಿ ಮಾಧುಸ್ವಾಮಿ

0
47

ಬೆಂಗಳೂರು: ಕೋವಿಡ್-19 ರ ಸಂದರ್ಭದಲ್ಲಿ 4 ಸಾವಿರದ 800 ಕೋಟಿ ವೆಚ್ಚವಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಮುಖ್ಯ ಮಂತ್ರಿಗಳ ಪರವಾಗಿ 2020ನೇ ಸಾಲಿನ “ಕರ್ನಾಟಕ ಧನವಿನಿಯೋಗ (ಸಂಖ್ಯೆ.3) ವಿಧೇಯಕ” ವನ್ನು ಪ್ರಸ್ತಾವನೆಗೆ ಸಲ್ಲಿಸಿದ ಸಚಿವರು ಕೋವಿಡ್-19 ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರಿಗೆ, ಮಡಿವಾಳರಿಗೆ, ದಿನಗೂಲಿ ಇಲ್ಲದ ಕಾರ್ಮಿಕರಿಗೆ, ಬೀದಿ ವ್ಯಾಪಾರಿಗಳಿಗೆ ಸಹಾಯ ಧನ ಒದಗಿಸಲು, ವೈದ್ಯಕೀಯ ಸಲಕರಣೆಗಾಗಿ, ಲಾಕ್ ಡೌನ್ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ. / ಬಿ.ಎಂ.ಟಿ.ಸಿ ನೌಕಕರಿಗೆ ವೇತನ ಪಾವತಿಸಲು, ಕೃಷಿ ಪರಿಕರಗಳಿಗೆ, ಬೀಜ ಖರೀದಿಸಲು, ಅಂಗನವಾಡಿಗೆ, ವಾರ್ತಾ ಇಲಾಖೆಯ ಜಾಹೀರಾತು ವೆಚ್ಚ ಭರಿಸಲು ಹಾಗೂ ಇತರ ವೆಚ್ಚಗಳಿಗಾಗಿ ಭರಿಸಲಾಗಿದೆ ಎಂದು ವಿವರಣೆ ನೀಡಿದ ನಂತರ ಪ್ರಸ್ತಾವನೆಯನ್ನು ಅಂಗೀಕರಿಸಿದರು.

Contact Your\'s Advertisement; 9902492681

ಹಲವು ವಿಧೇಯಕಗಳ ಅಂಗೀಕಾರ: 2020ನೇ ಸಾಲಿನ “ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ” ಮತ್ತು 2020ನೇ ಸಾಲಿನ “ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ ” ವನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ  ಪ್ರಸ್ತಾವನೆಯನ್ನು ಸದನವು ಅಂಗೀಕರಿಸಿ ವಿಧೇಯಕಕ್ಕೆ ಅನುಮೋದನೆ ನೀಡಿತು

ತುರ್ತು ವೆಚ್ಚಕ್ಕಾಗಿ 85 ರಿಂದ 500 ಕೋಟಿಗೆ ಹೆಚ್ಚಳ : ತುರ್ತು ಸಂದರ್ಭದಲ್ಲಿ ಸಾದಿಲ್ವಾರು ನಿಧಿಯಲ್ಲಿ ವೆಚ್ಚ ಮಾಡಲು ಈವರೆಗೆ 85 ಕೋಟಿ ಇದ್ದ ಮೊತ್ತವನ್ನು 500 ಕೋಟಿಗೆ ಹೆಚ್ಚಳ ಮಾಡಲಾಗುವುದು ಎಂದು  ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ವಿಧೇಯಕ” ವನ್ನು ಪ್ರಸ್ತಾವನೆಗೆ ಸಲ್ಲಿಸಿ ಮಾತಾನಾಡಿದ ಅವರು 1985 ರಿಂದ 85 ಕೋಟಿ ನಿಗದಿಯಾಗಿತ್ತು ಆಗ ಬಜೆಟ್‍ನ ಗ್ರಾತ್ರ 2,380 ಕೋಟಿ ಇತ್ತು ಈಗ ಬಜೆಟ್‍ನ ಗಾತ್ರ 2.44 ಲಕ್ಷ ಕೋಟಿ ಇರುವುದರಿಂದ ಹೆಚ್ಚಿಸಬೇಕೆಂದು ವಿವರಣೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here