ಬೆಂಗಳೂರು: ಭವಿಷ್ಯದಲ್ಲಿ ರೈತರಿಗೆ ಮಾರಕವಾಗಿ ಪರಿಣಮಿಸುವ ಮಸೂದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲು ಹೊರಟಿರುವ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ವಿರೋಧ ಪಕ್ಷದ ಅಭಿಪ್ರಾಯ ಮಂಡಿಸಲು ಸದನದಲ್ಲಿ ಅವಕಾಶ ಸಿಗದ ಕಾರಣ, ‘ಅನ್ನದಾತರಿಗೆ ಅನ್ಯಾಯ’ ಎಂಬ ಬರಹ ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸಿ ವಿರೋಧ ಪಕ್ಷದ ನಾಯಕರು ಅಧಿವೇಶನಲ್ಲಿ ಭಾಗವಹಿಸಿದರು.
ಕಾಂಗ್ರೆಸ್ ಪಕ್ಷದ ಈ ವಿನೂತನ ರೀತಿಯ ಪ್ರತಿಭಟನೆಗೆ ಇಂದು ವಿಧಾನಸೌಧ ಸಾಕ್ಷಿಯಾಯಿತು. ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು ಹಾಗೂ ಶಾಸಕರು ಈ ಮಾಸ್ಕ್‌ಗಳನ್ನು ಧರಿಸಿ ಸರ್ಕಾರದ ನಿರ್ಣಯದ ವಿರುದ್ಧ ಪ್ರತಿಭಟಿಸಿದರು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ರೈತರನ್ನು ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮರನ್ನಾಗಿ ಮಾಡುವ ಈ ಸುಗ್ರೀವಾಜ್ಞೆಗಳನ್ನು ರಾಜ್ಯ ಸರ್ಕಾರವು ಈ ಕೂಡಲೇ ಹಿಂಪಡೆಯಬೇಕೆಂದು ನಾಯಕರು ಈ ಮೂಲಕ ಆಗ್ರಹಿಸಿದ್ದಾರೆ.