ಗಾನ ಮುಗಿಸಿದ ಎಸ್‌ಪಿಬಿಗೆ ಗಾಯಕರಿಂದ ಶ್ರದ್ಧಾಂಜಲಿ

0
100

ವಾಡಿ: ಹಾಡು ನಿಲ್ಲಿಸಿ ಕಣ್ಮರೆಯಾದ ಗಾನ ಗಾರೂಡಿಗ ಡಾ.ಎಸ್.ಪಿ.ಬಾಲಶುಭ್ರಮಣ್ಯಂ ಅವರಿಗೆ ಸಿಮೆಂಂಟ್ ನಗರಿ ವಾಡಿ ಪಟ್ಟಣದ ಆರ್ಕೆಸ್ಟ್ರಾ ಗಾಯಕರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದರು. ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಜಮಾಯಿಸಿದ ಎಸ್‌ಪಿಬಿ ಅಭಿಮಾನಿಗಳು, ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕನ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಸಾರ್ವಜನಿಕವಾಗಿ ಮೌನ ಆಚರಿಸಿದರು.

ಈ ವೇಳೆ ಮಾತನಾಡಿದ ಸಂಗೀತ ರಸಮಂಜರಿ ಗಾಯಕ ಬಸವರಾಜ ಯಲಗಟ್ಟಿ, ಬಾಲು ಎಂಬ ಗಾನಗಂಧರ್ವ ಬಾಳಿನುದ್ದಕ್ಕೂ ಸಂಗೀತ ಲೋಕವನ್ನು ಆಳಿದ ಮಹಾನ್ ಗಾಯಕ. ಕನ್ನಡ, ತೆಲಗು, ತಮಿಳು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತಿಯ ಸಾಧನೆ. ಗಾಯನವಷ್ಟೇಯಲ್ಲದೆ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ ಮತ್ತು ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದರು. ಸಂಗೀತ ಲೋಕದಲ್ಲಿ ಅವರು ಮಾಡಿದ ಸಾಧನೆ ಚಿರಕಾಲ ಉಳಿಯಲಿದೆ. ಅವರ ಅದ್ಭುತ ಗಾಯನ ದೇಶದ ಸಂಗೀತ ರಸಿಕರ ಮನತಣಿಸಿವೆ. ಅವರ ಅಗಲಿಕೆಯಿಂದ ಸಂಗೀತ ಲೋಕ ಬಡವಾಗಿದೆ ಎಂದರು.

Contact Your\'s Advertisement; 9902492681

ಬಾಲಶುಭ್ರಮಣ್ಯಂ ಅವರ ಅಭಿಮಾನಿಗಳಾದ ಸತೀಶ ಸಾವಳಗಿ, ತಾಯಪ್ಪ ಮೇಕಲ್, ಮಲ್ಲಿಕಾರ್ಜುನ ಭಜಂತ್ರಿ, ನಾಗಭೂಷಣ ಸ್ಥಾವರಮಠ ಇಂಗಳಗಿ, ಚಂದ್ರಸೇನ ಮೇನಗಾರ, ಬಸಲಿಂಗಪ್ಪ ಮುನಗಲ್, ಮಹ್ಮದ್ ವಸೀಲ್ ಅಹ್ಮದ್, ಜಂಗಮ ಸಮಾಜದ ಮುಖಂಡ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಶರಣಪ್ಪ ಹಡಪದ, ಖೇಮಲಿಂಗ ಬೆಳಮಗಿ, ಭೀಮಾಶಂಕರ ಸಿಂಧೆ, ಕೆ.ಕುಮಾರ, ಶಿವಶಂಕರ ಕಾಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here