ಕಲಬುರಗಿ: ಫರತಾಬಾದ ಪೊಲೀಶ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 24 ಜನ ಜೂಜುಕೊರರನ್ನು ಬಂಧಿಸಿದ್ದಾರೆ.
ಕೊಳ್ಳೂರ ಗ್ರಾಮದಲ್ಲಿ ಧಾಳಿ ನಡೆಸಿದ ಸಿಸಿಬಿ ಪೊಲೀಸರು, ಮೊಹಮ್ಮದ್ ರೆಹಮಾನ್ (27), ಚಿನ್ನು ಪಾಟೀಲ್ (26) ಅರುಣ್ ದೊರೆ (23), ರಫೀಕ್ ಅಹಮದ್ ಶೇಕ್ (28) ಮಹಮ್ಮದ್ರಫೀಕ್ (36), ಎಲ್ಲಪ್ಪ ಜಂಗಮ್ (34) ಸೇರಿ 24 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್ ಮಾರ್ಗದರ್ಶನದ ಉಪ ಪೊಲೀಸ್ ಆಯುಕ್ತರು ಕಾನೂನು ಪಾಲಕರಾದ ಕಿಶೋರ್ ಬಾಬು, ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಆಯುಕ್ತರಾದ ಶ್ರೀಕಾಂತ ಕಟ್ಟಿ ಮನಿ ಅವರ ರಚಿಸಿದ ತಂಡ ಸಿಸಿಬಿ ಪಿಐ ದೀಲಿಪ್ ಸಾಗರ್ ನೇತೃತ್ವದ ರವೀಂದ್ರ, ಶರಣ್ಬಸ್ಸಪ್ಪ, ಮಲ್ಲಿಕರ್ಜುನ್, ಅಶೋಕ್ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಧಾಳಿಯಲ್ಲಿ 3 ಲಕ್ಷದ 51 ಸಾವಿರ 60 ರೂಪಾಯಿ ಜಪ್ತಿ ಮಾಡಲಾಗಿದೆ.
ಈ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.