ಕೋಲಾರ: ಜಿಲ್ಲೆ ಮತ್ತು ತಾಲೂಕಿನ ದಿಂಬಚಾಮನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಕಥೆ “ಮಹಾನಾಯಕ” ಎಂಬ ಐತಿಹಾಸಿಕ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ” ಜೀ ಕನ್ನಡ “ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರಿಗೆ ಹೃತ್ಪೂರ್ವಕ ಭೀಮ ವಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ದಿಂಬಚಾಮನಹಳ್ಳಿ ಗ್ರಾಮದ ಅಖಿಲ ಭಾರತ ಡಾ ಬಿ ಆರ್ ಅಂಬೇಡ್ಕರ್ ರವರ ಅನುಯಾಯಿಗಳು ಡಾ ಬಿ ಆರ್ ಅಂಬೇಡ್ಕರ್ ರವರ ಮಹಾ ನಾಯಕ ಧಾರಾವಾಹಿಯ ಪ್ಲೆಕ್ಸ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ತಮ್ಮ ಗ್ರಾಮದಲ್ಲಿ ಅಳವಡಿಸಿ ಪೂಜೆ ಸಲ್ಲಿಸಿ ಭೀಮ ವಂದನೆಗಳನ್ನು ಸಲ್ಲಿಸಿದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲು ಯಾವುದೇ ಜೀವ ಬೆದರಿಕೆ ಬಂದರೆ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ದಿಂಬಚಾಮನಹಳ್ಳಿ ಗ್ರಾಮದ ಅಖಿಲ ಭಾರತ ಡಾ.ಬಿ.ಆರ್ ಅಂಬೇಡ್ಕರ್ ರವರ ಅನುಯಾಯಿಗಳು ಹಾಗೂ ಗ್ರಾಮದ ಯುವ ಮುಖಂಡರು ತಿಳಿಸಿದರು.
ಅಂಬೇಡ್ಕರ್ ರವರ ಮಹಾ ನಾಯಕ ಧಾರಾವಾಹಿ ಮುಂದುವರೆಯಲಿ ಎಂದು ಜೈ ಭೀಮ್ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ದಿಂಬಚಾಮನಹಳ್ಳಿ ಗ್ರಾಮದ ಯುವ ಮುಖಂಡರು, ಹಿರಿಯರು, ಕಿರಿಯರು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.