ಸುರಪುರ: ಜಗತ್ತಿನ ಎಲ್ಲಾ ಧರ್ಮ ಮತ್ತು ಜಾತಿ ಮತಗಳ ಜರನ್ನು ತಮ್ಮವರೆಂದು ಭಾವಿಸಿ ಜೊತೆಗೆ ಕರೆದುಕೊಂಡು ಹೋಗುವ ಧರ್ಮವೆಂದರೆ ಅದು ವೀರಶೈವ ಲಿಂಗಾಯತ ಧರ್ಮವಾಗಿದೆ ಎಂದು ದೇವಾಪುರದ ಜಂಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ನಗರದ ರಂಗಂಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ೧೦ನೇ ತರಗತಿಯಲ್ಲಿ ಅತ್ಯೂನ್ನತೆ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬಸವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಅಂಕಗಳಿಸಲು ಮಾತ್ರ ಅಭ್ಯಾಸ ಮಾಡದೆ ಉಜ್ವಲ ಬದುಕು ರೂಪಿಸಿಕೊಳ್ಳಲು ಓದಬೇಕು.ಇಂದು ವೀರಶೈವ ಲಿಂಗಾಯತ ಯುವ ವೇದಿಕೆ ತಮಗೆ ಪ್ರಶಸ್ತಿ ನೀಡುವ ಮೂಲಕ ಮುಂದಿನ ಓದಿಗೆ ಪ್ರೋತ್ಸಾಹ ಮತ್ತು ಶುಭ ಹಾರೈಸಲು ಮುಂದಾಗಿದೆ,ತಾವೆಲ್ಲರು ಮುಂದೆ ಇನ್ನೂ ಹೆಚ್ಚಿನ ಅಂಕಗಳೊಂದಿಗೆ ಪಾಸಾಗಿ ಮತ್ತಷ್ಟು ಪ್ರಶಸ್ತಿಗಳು ಅರಸಿ ಬರುವಂತಾಗಿ ಎಂದು ಹಾರೈಸಿದರು.
ನಂತರ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗು ಮುಖಂಡರಾದ ಬಸವರಾಜ ಜಮದ್ರಖಾನಿ ಶಾಂತಪ್ಪ ಬೂದಿಹಾಳ ಮಾತನಾಡಿದರು,ನಿಷ್ಠಿ ಕಡ್ಲೆಪ್ಪನವರ ಮಠದ ಶ್ರಿ ಪ್ರಭುಲಿಂಗ ಸ್ವಾಮೀಜಿ ನಾಗಣ್ಣ ದಂಡಿನ್ ಮಲ್ಲಣ್ಣ ಸಾಹುಕಾರ ಶಿವರಾಜಪ್ಪ ಗೋಲಗೇರಿ ಎಸ್.ಎನ್.ಪಾಟೀಲ ಶರಣಪ್ಪ ಕಲಕೇರಿ ಸೂಗುರೇಶ ವಾರದ ಜಯಲಲಿತಾ ಪಾಟೀಲ ಶ್ವೇತಾ ಗುಳಗಿ ಸೋಮಶೇಖರ ಶಾಬಾದಿ ಮಂಜುನಾಥ ಜಾಲಹಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಗಣ್ಯರಾದ ಸಂಸದ ಸುರೇಶ ಅಂಗಡಿ ಶಾಸಕ ಬಿ.ನಾರಾಯಣರಾವ್ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಡಾ:ಈಶ್ವರಯ್ಯಮಠ ಡಾ: ಬಸವರಾಜ ಪಾಟೀಲ್ ಸೇರಿದಂತೆ ಅನೇಕರಿಗೆ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಸುರಪುರ ಮತ್ತು ಹುಣಸಗಿ ತಾಲೂಕಿನ ನಲವತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಸವ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು,ಕುಮಾರಿ ಬಸವಶ್ರೀ ವಚನ ಗಾಯನ ಮಾಡಿದರು,ಜಗದೀಶ ಪಾಟೀಲ ಸ್ವಾಗತಿಸಿದರು,ಶಿವರುದ್ರ ಉಳ್ಳಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಂತರಾಜ ಬಾರಿ ವಿರೇಶ ದೇಶಮುಖ ಪ್ರದೀಪ ಕದರಾಪುರ ಚಂದ್ರಶೇಖರ ಡೊಣೂರ ವಿರೇಶ ಪಂಚಾಂಗಮಠ ಡಿ.ಸಿ.ಪಾಟೀಲ ಮಹೇಶ ಪಾಟೀಲ ಮಲ್ಲಿಕಾರ್ಜುನ ರಡ್ಡಿ ವಿಕಾಸ ಸೊನ್ನದ ಪ್ರಕಾಶ ಅಂಗಡಿ ರಾಜೇಶ್ವರಿ ಶೆಟ್ಟಿ ಸಂಗಮೇಶ ಚೆನ್ನಶೆಟ್ಟಿ ಚನ್ನಬಸವ ಗಚ್ಚಿನಮನಿ ಸಂಗು ಗುಳಗಿ ಗುರು ಹಾವಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.