ನಿರಂತರ ಮಳೆಯಿಂದ ಹಳೆ ದರಬಾರ ಗೋಡೆಗಳು ಶಿಥಿಲ

0
55
ನಿಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ಹಳೆ ದರಬಾರ ಕಟ್ಟಡದ ಗೋಡೆಗಳು ಶಿಥಿಲಗೊಂಡು ಬೀಳುವ ಹಂತ ತಲುಪಿರುವುದು.

ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನಗರದ ಹಳೆ ದರಬಾರ ಕಟ್ಟಡದ ಗೋಡೆಗಳು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿವೆ.

ಬಹು ಸುಂದರವಾದ ಕಟ್ಟಡ ಇದಾಗಿದ್ದು ಗೋಡೆಗಳ ಮೇಲೆ ಮತ್ತು ಕಟ್ಟಡದ ಮೇಲ್ಛಾವಣಿಯ ಮೇಲು ಸುಂದರವಾದ ಕೆತ್ತನೆಗಳಿವೆ,ಈಗ ನಿರಂತವಾಗಿ ಮಳೆ ಸುರಿಯುತ್ತಿರುವುದರಿಂದ ಗೋಡೆಗಳು ಬೀಳುತ್ತಿವೆ.ಅಲ್ಲದೆ ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ಬೇಳೆಯುತ್ತಿರುವುದರಿಂದ ಕಟ್ಟಡಕ್ಕೆ ಮತ್ತಷ್ಟು ಹಾನಿಯಾಗುತ್ತಿದೆ ಎಂದು ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಆತಂಕ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಮಾತನಾಡಿ,ಸುಮಾರು ಎರಡು ನೂರು ವರ್ಷಗಳಷ್ಟು ಹಳೆಯದಾದ ಕಟ್ಟಡವಿದು.ಸುರರಪು ಸಂಸ್ಥಾನದ ಐತಿಹಾಸಿಕ ಕುರುಹುನಂತಿದೆ.ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯದಿಂದ ಈಗ ಶಿಥಿಲಾವಸ್ಥೆ ತಲುಪಿದೆ.ಈ ಕಟ್ಟಡದ ಮಹಾದ್ವಾರದ ಬಲ ಭಾಗದಲ್ಲಿ ಗೃಹ ರಕ್ಷಕ ದಳದ ಕಚೇರಿ ಹಾಗು ಹಳೆಯ ಪೋಸ್ಟ್ ಆಫೀಸ್ ಇದೆ.ಇವುಗಳು ಈಗ ಮಳೆಯಿಂದ ಹಾನಿಗೊಳಗಾಗಿ ಸೋರುತ್ತಿವೆ.

ಕೂಡಲೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಳೆ ದರಬಾರ ಕಟ್ಟಡದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here