ಕರಡಕಲ್ ಪಡಿತರ ನ್ಯಾಯಬೆಲೆ ಅಂಗಡಿ ಅಮಾನತ್ತಿಗೆ ತಹಸೀಲ್ದಾರರಿಗೆ ಮನವಿ

0
261

ಸುರಪುರ: ತಾಲೂಕಿನ ಕರಡಕಲ್ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೧ರ ವಿತರಕರು ಸರಿಯಾಗಿ ಪಡಿತರ ಧಾನ್ಯಗಳ ವಿತರಣೆ ಮಾಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರಡಕಲ್ ಗ್ರಾಮದ ಅನೇಕ ಜನ ಪಡಿತರ ಚೀಟಿದಾರರು ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನ್ಯಾಯಬೆಲೆ ಅಂಗಡಿ ಅಮಾನತ್ತುಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಡಿತರ ಚೀಟಿದಾರ ವಿನಾಯಕ ಕರಡಕಲ್ ಮಾತನಾಡಿ,ನಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿ ೧೧ರ ವಿತರಕರು ಸರಿಯಾಗಿ ಪಡಿತರ ಧಾನ್ಯಗಳನ್ನು ವಿತರಣೆ ವಂಚಿಸುತ್ತಿದ್ದಾರೆ.ಒಂದು ಕಾರ್ಡಿಗೆ ೫೦ ಕೆಜಿ ಬದಲು ೪೦ ಕೆಜಿ,೭೫ ಕೆಜಿ ಧಾನ್ಯದ ಬದಲು ೫೦ ಕೆಜಿ ಹೀಗೆ ಅನೇಕ ಪಡಿತರ ಚೀಟಿದಾರರಿಗೆ ಮೋಸವೆಸಗಿದ್ದಾರೆ.ಇದನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕುವ ಮೂಲಕ ಅಕ್ರಮ ನಡೆಸುತ್ತಿದ್ದಾರೆ.ಇದರ ಕುರಿತು ಈಗಾಗಲೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ಆಹಾರ ನಿರೀಕ್ಷಕರು ಗ್ರಾಮಕ್ಕೆ ಬಂದು ನ್ಯಾಯಬೆಲೆ ಅಂಗಡಿಯವರ ಅಕ್ರಮದ ಬಗ್ಗೆ ಚೀಟಿದಾರರಿಂದ ಮಾಹಿತಿ ಪಡೆದುಕೊಂಡು ಬಂದಿದ್ದಾರೆ.

Contact Your\'s Advertisement; 9902492681

ಆದರೆ ತನಿಖೆಯ ವರದಿಯನ್ನು ಇದುವರೆಗೂ ಜಿಲ್ಲಾಧಿಕಾರಿಗಳಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ.ಇದನ್ನು ನೋಡಿದಲ್ಲಿ ಆಹಾರ ನಿರೀಕ್ಷಕರು ಕೂಡ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಅನುಮಾನ ಮೂಡಿದೆ.ಇದರಿಂದ ಇಡೀ ಗ್ರಾಮದ ಅನೇಕ ಪಡಿತರ ಚೀಟಿದಾರರು ಬೇಸತ್ತು ಹೋಗಿದ್ದರಿಂದ ಇಂದು ಪುನಃ ತಹಸೀಲ್ದಾರರ ಮೂಲಕ ನ್ಯಾಯಬೆಲೆ ಅಂಗಡಿ ವಿತರಕರ ಮೇಲೆ ಕ್ರಮಕ್ಕಾಗಿ ಸಲ್ಲಿಸುತ್ತಿದ್ದು ಒಂದು ವೇಳೆ ಶೀಘ್ರವೆ ಕ್ರಮ ಕೈಗೊಳ್ಳದಿದ್ದಲ್ಲಿ ತಹಸೀಲ್ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಸಿರಸ್ತೆದಾರ ನಜೀರ್ ಅಹ್ಮದ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮಲ್ಲಯ್ಯ ನಾಯಕ ಡಿ.ಎಸ್.ನಾಯಕ ಬಸವರಾಜ ಶ್ರೀಧರ ತಿಪ್ಪಣ್ಣ ಛಲವಾದಿ ಮಂಜುನಾಥ ಬಡಿಗೇರ ಶ್ರೀನಿವಾಸ ದೊರೆ ದೇವಪ್ಪ ಘಂಟಿ ಭಾಗಣ್ಣ ಪರಸನಹಳ್ಳಿ ಭೀಮಣ್ಣ ರತ್ತಾಳ ಶರಣಬಸವ ಕೂಡ್ಲಿಗೆಪ್ಪ ಮುಂದಾತದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here