ಓದುಗರ ವೇದಿಕೆ: ಪವರ್ ಟಿವಿ ಪ್ರಸಾರಕ್ಕೆ ತಡೆ : ಹೋರಾಟಗಾರ ಪಾಣೇಗಾಂವ್ ಆಕ್ರೋಶ

0
99

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ  ಪವರ  ಟಿವಿ  ಪ್ರಸಾರಕ್ಕೆ ತಡೆ ಹಾಕಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಭ್ರಷ್ಟಾಚಾರ ನಡೆಸಿದ್ದಾರೆಂಬ ಕಳೆದ ಹಲವು ದಿನಗಳಿಂದ ದಾಖಲೆ ಸಹಿತ ಸತತವಾಗಿ ವರದಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ ಪವರ್ ಟಿವಿ ವಾಹಿನಿಯಲ್ಲಿ ಬಂದ್ ಮಾಡಿದಕ್ಕೆ ಎಲ್ಲ ಮಾಧ್ಯಮಗಳು ಒಂದಾಗಬೇಕು ಮತ್ತು ಮಾಧ್ಯಮಕಿರುವ ಪತ್ರಿಕಾ ಸ್ವಾತಂತ್ರ್ಯ ಎತ್ತಿಹಿಡಿಯಬೇಕು.

ಸಿಎಂ ಪುತ್ರ ಪ್ರಶ್ನಾತೀತರೇ?  ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ದೌರ್ಜನ್ಯ ಎಂದು ಹೇಳಬಹುದು.ಪ್ರಜಾಪ್ರಭುತ್ವದ ಒಂದು ಅಂಗವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತದೆ. ‘ಭ್ರಷ್ಟಾಚಾರ’ ದಂತಹ  ಸಾಮಾಜಿಕ ಸಮಸ್ಯೆಯ ವಿರುದ್ಧ ಮಾತನಾಡುವ ಹಕ್ಕು ಸಂವಿಧಾನ  ನೀಡಿದೆ. ಮಾಧ್ಯಮ  ನಾಲ್ಕನೇ ಅಂಗ ಎಂದು ಕರೆಯಲಾಗಿದೆ. ಆದರೆ ರಾಜ್ಯ ಸರಕಾರ  ಮಾಧ್ಯಮದ  ಸ್ವಾತಂತ್ರ ಹರಣ  ಮಾಡಿದರೆ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನ ಆಶಯಕ್ಕೆ ವಿರುದ್ಧವಲ್ಲವೇ?  ಪವರ್ ಟಿವಿ  ಮುಖ್ಯಸ್ಥರ ಮೇಲೆ ಆರೋಪ ವಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಟಿವಿಯ ಪ್ರಸಾರ ತಡೆ ಹಾಕಿರುವುದು ಸರಿಯಾದ ಕ್ರಮವಲ್ಲ.

Contact Your\'s Advertisement; 9902492681

ಈ ಕೂಡಲೇ ರಾಜ್ಯದ ಮುಖ್ಯಮಂತ್ರಿ ಎಚ್ಚೆತ್ತುಕೊಂಡು ಲೈವ್ ಪ್ರಸಾರ ತಕ್ಷಣ ಬಂದ್ ಮಾಡಿದ್ದನ್ನು ಕೈ ಬಿಡಲು ಸೂಚನೆ ನೀಡಬೇಕು ಎಂದು ಆಗ್ರಹಿಸುತ್ತೇನೆ.

  • ಭೀಮಾಶಂಕರ ಪಾಣೇಗಾಂವ್, ಹೋರಾಟಗಾರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here