ಅತ್ಯಾಚಾರವೆಸಗಿದ ಆರೋಪಿಗಳಿಗೆ ಶಿಕ್ಷೆ ನೀಡಲು ಆಗ್ರಹಿಸಿ ಪ್ರತಿಭಟನೆ

0
40

ರಾಯಚೂರು: ಹತ್ರಾಸ್ ನಲ್ಲಿ ನಡೆದ ಗುಂಪು ಆತ್ಯಾಚಾರವನ್ನು ಖಂಡಿಸಿ ಎಐಡಿಎಸ್ಒ, ಎಐಡಿವೈಒ ಮತ್ತು ಎಎಎಮ್‌ಎಸ್‌ಎಸ್ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು ಘಟನೆಯನ್ನು ವಿರೋಧಿಸಿ ಘೋಷಣೆ ಕೋಗಿದರು. ಅಖಿಲ ಭಾರತ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಉತ್ತರ ಪ್ರದೇಶದ ಹತ್ರಾಸಿನ ಯುವತಿ ದೆಹಲಿಯ ಸಫ್ತಾರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ, ನಾಲ್ಕು ಜನ ಯುವಕರು ಗುಂಪೊಂದು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಗೆ ಇಂತಹ ಘಟನೆಗಳು ಸಾಕ್ಷಿಯಾಗಿವೆ ಎಂದರು.

ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಗಳಿದ್ದರೂ ದೇಶದ ಮಹಿಳೆಯರು ಹಾಗೂ ಮಕ್ಕಳ ಘನತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ದೇಶದ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿ ಹೊಂದಿಲ್ಲದಿರುವುದು ನಾಚಿಕೆಗೇಡಿನ ಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಕಾರ್ಪೋರೇಟ್ ಕುಳಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ನಗ್ನತೆ, ಆಶ್ಲೀಲತೆ, ಡ್ರಗ್ಸ್ ಮತ್ತು ಮಧ್ಯಪಾನ ಮುಂತಾದವುಗಳಿಗೆ ಸರ್ಕಾರಗಳು ಬೆಂಬಲವಾಗಿ ನಿಂತಿವೆ, ಜನರ ಹಿತರಕ್ಷಣೆ ಮಾಡಬೇಕಾಗಿರುವ ಪೊಲೀಸರೇ ಅಪರಾಧಿಗಳೊಂದಿಗೆ ನಿಂತಿರುವುದು ಅತ್ಯಂತ ಶೋಚನೀಯ ಸಂಗತಿ, ಪೊಲೀಸರು ರಾಜಕಾರಣಿಗಳು ಮತ್ತು ಕ್ರಿಮಿನಲ್ ಗಳ ನಡುವಿನ ಹೊಂದಾಣಿಕೆಯಿಂದಾಗಿ ದಿನದಿಂದ ದಿನಕ್ಕೆ ಸಮಾಜ ಹಾಳಾಗುತ್ತಿದೆ ಎಂದು ಹೇಳಿದರು.

ಈ ಪ್ರಕರಣವನ್ನು ಫಾಸ್ಟ್ ಟ್ಯಾಕ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ ಆಪರಾಧಿಗಳಿಗೆ ಶಿಕ್ಷೆ ವಿಧಿಸ ಬೇಕು, ಅಶ್ಲೀಲತೆ, ಡಗ್ಸ್ ಮತ್ತು ಮದ್ಯವನ್ನು ಕೊನೆಗೊಳಿಸಬೇಕು, ಸಾಮಾಜಿಕ ಪಿಡುಗುಗಳ ವಿರುದ್ಧ ಚಳುವಳಿಯನ್ನು ಗಟ್ಟಿಗೊಳಿಸಬೇಕು ಮತ್ತು ಮಹಿಳೆಯರ ಭದ್ರತೆ, ಘನತೆ ಹಾಗೂ ಸಮಾನತೆಯನ್ನು ಖಾತ್ರಿಪಡಿಸಲು ಸಾಮಾಜಿಕ – ಸಾಂಸ್ಕೃತಿಕ ಚಳುವಳಿಯನ್ನು ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ , ಎಐಡಿಎಸಓ ಜಿಲ್ಲಾ ಕಾರ್ಯದರ್ಶಿ ಪೀರ್‌ಸಾಬ್‌, ಎಐಎಮ್‌ಎಸ್‌ಎಸ್ ಸಂಘಟನಾಕಾರ ಉಮಾಮಹೇಶ್ವರಿ, ಗಾಯತ್ರಿ,ಆಪೂರ್ವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here