ರಾಯಚೂರು: ಪವರ್ ಟಿವಿ ವಾಹಿನಿ ಲೈವ್ ಬಂದ್ ಮಾಡಿರುವುದು ಕ್ರಮ ಅಲ್ಲ, ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ.
ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಸಲ್ಲಿಸಲಾಯಿತು.
ಅವರಿಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪವರ್ ಟಿವಿ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ ಆದರೆ, ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನೆ ನಂಬಿಕೊಂಡು ಕುಟುಂಬಗಳು ಬೀದಿಗೆ ಬರುತ್ತದೆ. ಈ ಕೋಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ , ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರ.ಕಾ ಗುರುನಾಥ್, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್, ಉಪೇಂದ್ರ ಕೇಶವರಾವ್, ಭೀಮರಾಯ ಹದ್ದಿನಾಳ, ಎಂ.ಪಾಶಾ, ಅಸ್ರಫ್, ಸತೀಶ ಹಿರೇಮಠ, ಮಲ್ಲಿಕಾರ್ಜುನ ಸ್ವಾಮಿ, ಅಮರೇಶ, ಪ್ರಸನ್ನ, ಮಲ್ಲಿಕಾ ರ್ಜುನ ಸ್ವಾಮಿ ಹಿರೇಮಠ, ವೆಂಕಟೇಶ ಹೂಗಾರ್, ಶ್ರೀಕಾಂತ್ ಸಾವೂರ, ಮಹಾನಂದ, ರಾಮಕೃಷ್ಣ ದಾಸರ್, ಸಿದ್ದಯ್ಯ ಸ್ವಾಮಿ ಹಿರೇಮಠ, ಮುತ್ತಣ್ಣ, ರಾಜೇಂದ್ರ, ಪ್ರಹ್ಲಾದ್ ಕುಲಕರ್ಣಿ, ರಾಚಯ್ಯ ಸ್ವಾಮಿ ಮಚನೂರು, ಚನ್ನಬಸವ, ಖಾದರ್,ಶ್ರೀನಿವಾಸ, ಶಿವಕುಮಾರ್, ಯಲ್ಲಪ್ಪ, ಶ್ರೀನಿವಾಸ, ಎ.ಬಾಲು, ಹನುಮಂತು, ಲಿಂಗರಾಜ್ ಸೇರಿದಂತೆ ಇತರರಿದ್ದರು.
- ಮುತ್ತಣ್ಣ ರಾಯಚೂರು