ಕೊನೆಗಾಲ: ಕವಿತೆ

0
106

ಕೊನೆಗಾಲ

ಶಾಂತಿ ಬಯಸುತ್ತಿದ್ದವರ
ನಾಲಿಗೆ ಕ್ರಾಂತಿಗಾಗಿ ಅರಚುತ್ತಿದೆ

ಸಹನೆ ಬೋದಿಸುತ್ತಿದ್ದ ಬಾಯಿ
ಸಿಟ್ಟು ಕಾರುತ್ತಿದೆ

Contact Your\'s Advertisement; 9902492681

ಜಾತಿಯ ಗೋಡೆ ಕಟ್ಟುತ್ತಿದ್ದ ಕೈಗಳು
ಜನಾಂದೋಲನದ ಕಹಳೆ ಊದುತ್ತಿವೆ

ಸಂಧಾನದ ಪಾಠ ಹೇಳುತ್ತಿದ್ದ ಗಂಟಲುಗಳು
ಸಂಘರ್ಷದ ಘೋಷಣೆ ಮೊಳಗಿಸುತ್ತಿವೆ

ವೈರಿ ಬಲಗೊಂಡಿದ್ದಾನೆ
ಬದುಕಿಗೆ ಬೇಲಿ ಬಿಗಿಯುತ್ತಿದ್ದಾನೆ

ಉಳಿದಿರೋದು ಒಂದೇ ದಾರಿ
ಸಿಡಿದೇಳಬೇಕು ಇಲ್ಲ
ನಮ್ಮ ಸಮಾದಿ ನಾವೇ ಕಟ್ಟಿಕೊಳ್ಳಬೇಕು.

-ಮಡಿವಾಳಪ್ಪ ಹೇರೂರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here