ಕಲಬುರಗಿ: ಸರ್ಕಾರ ಕರೋನಾ ತಡೆಯಲು ಮಾಸ್ಕ್ ಹಾಕದಿದ್ರೆ ದಂಡ ವಸೂಲಿ ಸ್ವಾಗತಾರ್ಹ ಆದರೆ ದಂಡ ಹಾಕಿದ ಬಳಿಕ ಅವರಿಗೆ ಒಂದು ಮಾಸ್ಕ್ ನೀಡಿ ಜಾಗೃತಿ ಕೂಡ ಮೂಡಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರ ಕರೋನಾ ತಡೆಯಲು ಅನೇಕ ನಿಯಮ ಜಾರಿ ಮಾಡಿದೆ. ಪಟ್ಟಣ, ನಗರಗಳಲ್ಲಿ ಮಾಸ್ಕ್ ಧರಿಸದಿದ್ದರೆ 1000 ರೂ.ದಂಡ, ಹಳ್ಳಿಗಳಲ್ಲಿ 500 ರೂ.ದಂಡ ವಿಧಿಸಲಾಗುತ್ತಿದೆ , ಸರಕಾರದ ನಿಯಮ ಸ್ವಾಗತಾರ್ಹ. ಆದರೆ ಬಡವರು ಇಷ್ಟು ಹಣ ಕಟ್ಟಲು ಸಾಧ್ಯವಿಲ್ಲ. ಈಗಾಗಲೇ ಬೈಕ್ ದಾಖಲೆ, ಹೆಲ್ಮೆಟ್ ನೆಪದಲ್ಲಿ ಜನರ ಸುಲಿಗೆ ನಡೆಯುತ್ತಿದೆ. ಹೀಗಾಗಿ ದಂಡ ಹಾಕುವ ಜತೆಗೆ ಮಾಸ್ಕ್ ಕೊಟ್ಟರೆ ಜಾಗೃತಿ ಕೂಡ ಮೂಡಿಸಿದಂತಾಗುತ್ತದೆ ಎಂದು ತೆಗನೂರ ತಿಳಿಸಿದ್ದಾರೆ.
ಹೀಗೆ ಸ್ಥಳೀಯವಾಗಿ ಮಾಸ್ಕ್ ಹೊಲಿಗೆ ಮಾಡಿಸಿ ಕೊಡುವುದರಿಂದ ಆಯಾ ತಾಲೂಕು, ಠಾಣಾ ವ್ಯಾಪ್ತಿಯಲ್ಲಿ ಕೊಡುವುದರಿಂದ ಸಾವಿರಾರು ಮಂದಿಗೆ ಉದ್ಯೋಗ ಕೂಡ ಸಿಗಲಿದೆ ಎಂದು ಅವರು ಹೇಳಿದ್ದಾರೆ.ಜನ ಜಾಗೃತಿ ಮತ್ತು ಒಂದು ಉತ್ತಮ ವಿಚಾರ ಸರ್ಕಾರದ ಗಮನಕ್ಕೆ ತರುವ ಕೆಲಸ ಅವರು ಮಾಡಿದ್ದಾರೆ.