ಬೆಂಗಳೂರು : ನಗರದ ಸಂಪಂಗಿ ರಾಮನಗರ ನಗರದ ರಾಜಕುಮಾರ ಪ್ರತಿಮೆಯ ಬಳಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ವತಿಯಿಂದ ಮಹಾತ್ಮ ಗಾಂಧಿಯವರ 151 ಜಯಂತಿ ಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಕುರಿತು ಕುರಿತು SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡುತ್ತಾ ಗಾಂಧಿಯವರ ತ್ಯಾಗ, ಬಲಿದಾನ ಬಹಳಷ್ಟು ಇದೆ. ಅವರು ತಮ್ಮ ಜೀವನವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟವರು, ಸ್ವಾತಂತ್ರ್ಯ ಕ್ಕಾಗಿ ಅಷ್ಟೇ ಅಲ್ಲದೆ ದೇಶದಲ್ಲಿ ಸಮಾನತೆ, ಗ್ರಾಮ ಅಭಿವೃದ್ದಿ, ಬಡತನ, ಅಸ್ಪೃಶ್ಯತೆ ನಿವಾರಣೆಗೆ ಸೇರಿ ಸಾಮಾಜಿಕ ಅಸಮಾನತೆ ಗಳ ವಿರುದ್ದ ಹೋರಾಡಿದರು.
ದುರಂತ ಅಂದರೆ ಅವರನ್ನು ಹತ್ಯೆ ಮಾಡಿದ ಸಂತತಿಯವರು ಇಂದು ಗಾಂಧಿಯವರ ವಿಚಾರಗಳನ್ನು ಹತ್ಯೆ ಮಾಡಲು ಮುಂದಾಗಿದ್ದಾರೆ ಹಾಗಾಗಿ ವಿದ್ಯಾರ್ಥಿ, ಯುವಜನರು ಗಾಂಧಿಯವರ ನಿಜವಾದ ಆಶಯಗಳನ್ನು ಮುಂದಕ್ಕೆ ಕೊಂಡೊಯ್ದು ಅವರ ಕನಸು ನನಸ್ಸಾಗಲಿ ಅವರು ಹಾಕಿ ಕೊಟ್ಟ ಸತ್ಯಾಗ್ರಹ ಸೇರಿ ಹೋರಾಟದ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ SFI ರಾಜ್ಯ ಸಮಿತಿಯ ಸದಸ್ಯರಾದ ಸಂಗಮೇಶ, ಶಿವಣಗಿ, ಬೆಂಗಳೂರು ಜಿಲ್ಲಾ ಜಂಟಿ ಕಾರ್ಯದರ್ಶಿ ಸಾಗರ್, ಮುಖಂಡರಾದ ಜಗದೀಶ್, ಜಯ ಕರ್ನಾಟಕ ಸಂಘಟನೆಯ ವೆಂಕಟೇಶ ಸೇರಿ ಇತರರು ಇದ್ದರು.