ಕಲಬುರಗಿ: ನಗರದ ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಅಹಿಂಸಾ ತತ್ವವನ್ನು ಸಾರಿದ ಮಹಾನ್ ಚೇತನ, ಶಾಂತಿಮಾರ್ಗದಲ್ಲಿಯೇ ಭಾರತಾಂಬೆಯ ಮಕ್ಕಳನ್ನು ಒಗ್ಗೂಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿಲಾಯಿತು.
ಪ್ರಾಸ್ತಾವಿಕವಾಗಿ ಸಂಜೀವಕುಮಾರ ಶೆಟ್ಟಿ ಮಾತನಾಡಿ ಆಗಿನ ಸಮಯದಲ್ಲಿ ಬಹಳ ಪ್ರಚಲಿತದಲ್ಲಿದ್ದ ಅಸ್ಪೃಶ್ಯತೆಯ ವ್ಯವಸ್ಥೆಯನ್ನು ತೆಗೆದುಹಾಕಲು ಅವರು ದಣಿವರಿಯಿಲ್ಲದೆ ಶ್ರಮಿಸಿದರು. ಇದಲ್ಲದೆ ಅವರು ಮಹಿಳೆಯರಿಗೆ ಅಧಿಕಾರ ನೀಡಿದರು ಮತ್ತು ಭಾರತೀಯ ರೈತರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಕೆಲಸ ಮಾಡಿದರು. ಅಷ್ಟೇ ಅಲ್ಲದೇ ಮೂರು ಪ್ರಮುಖ ಚಳುವಳಿಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವುಗಳೆಂದರೆ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿ. ಬೇರೆ ರೀತಿಯಲ್ಲಿ ಹೇಳುವುದಾದರೆ ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ನಮ್ಮ ಗಾಂಧೀಜಿ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಗಮೇಶ ಸರಡಗಿ ಮಾತನಾಡಿ ಮಹಾತ್ಮಾ ಗಾಂಧೀಜಿಯವರು ನುಡಿದಂತೆ ನಡೆದು, ತಮ್ಮ ಗುರಿಯನ್ನು ತಲುಪುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಹೀಗಾಗಿ, ಇಂದಿನ ಮಕ್ಕಳು ಗಾಂಧೀಜಿಯವರ ಆದರ್ಶ, ತತ್ವಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಶಿವಕಾಂತ ಚಿಮ್ಮಾ, ರೇವಣಸಿದ್ದಪ್ಪ ರುದ್ರವಾಡಿ, ಶ್ರೀನಿವಾಸ ಬುಜ್ಜಿ, ಶಂಬುಲಿಂಗ ವಾಡಿ, ರಾಜಶೇಖರ ಜಕ್ಕಾ, ಶಿವಾನಂದ ಬುಜರಿ, ಪೂಜಾರಿ, ಚಂದ್ರಕಾಂತ ಕಟಕೆ, ದಿಲೀಪ ಬಕರೆ, ಬಸವರಾಜ ರಟಕಲ, ಕೆ.ವಿ ಕಾರ್ಯಕ್ರಮದಲ್ಲಿ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಶಿವಕಾಂತ ಚಿಮ್ಮಾ, ರೇವಣಸಿದ್ದಪ್ಪ ರುದ್ರವಾಡಿ, ಶ್ರೀನಿವಾಸ ಬುಜ್ಜಿ, ಶಂಬುಲಿಂಗ ವಾಡಿ, ರಾಜಶೇಖರ ಜಕ್ಕಾ, ಶಿವಾನಂದ ಬುಜರಿ, ಪೂಜಾರಿ, ಚಂದ್ರಕಾಂತ ಕಟಕೆ, ದಿಲೀಪ ಬಕರೆ, ಬಸವರಾಜ ರಟಕಲ, ಕೆ.ವಿ ಕುಲಕರ್ಣಿ, ಪುಂಡಲೀಕ ಜಮಾದಾರ, ಬಸವರಾಜ ಪಾಟೀಲ, ಉಮೇಶ ಪಾಣೆಗಾಂವ, ನರಸಿಂಗ ಕಟಕೆ, ತೇಜಸ್ವಿ ಸರಡಗಿ ಇನ್ನಿತರರು ಭಾಗವಹಿಸಿದ್ದರು.
ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ವಿರೇಶ ಬೋಳಶೆಟ್ಟಿ ನರೋಣಾ ವಂದಿಸಿದರು.