ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯಗೆ ಹುಣಸೂರು ನಿಂದ ಕೆಲಸ ಕ್ಕೆ ಬಂದು ಶನಿವಾರಸಂತೆ ತ್ಯಾಗರಾಜ ಕಾಲೋನಿ ಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 60 ವರ್ಷದ ಅಜ್ಜಿಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕಾರ್ತರು ಮಹಾತ್ಮ ಗಾಂಧಿಜಿ ಜಯಂತಿ ನಿಯಮಿತ ನಾಥ ಅಜ್ಜಿಯನ್ನು ರಕ್ಷಣೆ ಮಾಡಿ ಅನಾಥಾಶ್ರಮಕ್ಕೆ ಸೇರಿಸಿ ಗಾಂಧಿ ಜಯಂತಿ ಆಚರಿಸಿ.
ಜೈಲು ಸೇರಿದ ಮಗನ ತಾಯಿ ಅನಾಥರಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಕಾರ್ಯಕರ್ತರು ಅನಾಥೆಯಾಗಿ ಅಜ್ಜಿಗೆ ಊಟಕ್ಕೂ ತೊಂದರೆಯಾಗಿ ರಸ್ತೆ ಬದಿಯಲ್ಲಿ ಓಡಾಡಿಕೊಂಡಿದ್ದರು ಎನ್ನಲಾಗಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಶಿವರಾಮೇಗೌಡರ ಕರವೇ ತಂಡಕ್ಕೆ ತಿಳಿಸಿದರು.
ಕರವೇ ತಂಡ ಭೇಟಿ ನೀಡಿ, ಅಜ್ಜಿಯನ್ನು ಮಾತನಾಡಿಸಿದಾಗ ನನ್ನನ್ನು ಅನಾಥಶ್ರಮಕ್ಕೆ ಸೇರಿಸಿ ಅಂತ ಕೇಳಿಕೊಂಡ ಮೇರೆಗೆ .ಆ ಅರ್ಜಿಯನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಕೊರೊನಾ ಟೆಸ್ಟ್ ಮಾಡಿಸಿ ಮತ್ತು ಶನಿವಾರಸಂತೆ ಪೊಲೀಸ್ ಠಾಣೆಯಿಂದ ಈ ಅಜ್ಜಿಯನ್ನು ಸೇರಿಸಲು ಲೆಟರ್ ಮಾಡಿಸಿಕೊಂಡು, ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಗೆ ಕರವೇ ಕಾರ್ಯಕರ್ತರು ಈ ಅಜ್ಜಿಯನ್ನು ಕರೆದುಕೊಂಡು ಹೋಗಿ ಸೇರಿಸಿದರು.
ವಿಕಾಸ್ ಜನಸೇವಾ ಟ್ರಸ್ಟ್ ಸುಂಟಿಕೊಪ್ಪ ಅಜ್ಜಿಯನ್ನು ಸೇರಿಸಿಕೊಂಡಿದ್ದಕ್ಕೆ, ಪೊಲೀಸರು ಸಹಕರಿಸಿದರಿಂದ ಮತ್ತು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್ ಮಾಡಲು ಸಹಕರಿಸಿದ ಎಲ್ಲ ಸಿಬ್ಬಂದಿಗಳಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಸೋಮವಾರಪೇಟೆ ತಾಲ್ಲೂಕು ಕರವೇ ಕಾರ್ಯದರ್ಶಿ ರಾಮನಹಳ್ಳಿ ಪ್ರಾವಿಣ್ , ಅನಂದ, ರಂಜಿತ್, ಸೇರಿದಂತೆ ಮುಂತಾದವರು ಇದ್ದರು.