ಜೇವರ್ಗಿ: ಅಧಿಕಾರರೂಢ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ದುಡಿಯುವ ವರ್ಗ ಹಾಗೂ ಸಾಮಾನ್ಯ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಟೀಕಿಸಿದ್ದಾರೆ.
ಇಲ್ಲಿನ ಪಕ್ಷದ ಕಾರ್ಯಾಲಯದ ಮುಖ್ಯ ರಸ್ತೆಯ ಮೂಲಕ ಪ್ರತಿಭಟನೆ ಮಾಡಿ ಜೇವರ್ಗಿ ತಶಿಲ್ದಾರರಿಗೆ ಮನವಿ ಸಲ್ಲಿಸಿದರು.
ದೇಶದ ಬೆನ್ನೆಲುಬಾದ ರೈತರ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಇರುವ ಕಾನೂನುಗಳನ್ನು ಸುಧಾರಿಸುವ ಮೂಲಕ ಕ್ರಮಗಳನ್ನು ಕೈಗೊಳ್ಳದೆ ರೈತರ ಜಮೀನನ್ನು ದಲ್ಲಾಳಿಗಳು ಹಾಗೂ ಶ್ರೀಮಂತರಿಗೆ ಮಾರಾಟ ಮಾಡಲು ಅನುಮತಿ ನೀಡುವ ನೂತನ ಕಾಯ್ದೆ ಹಾಗೂ ರೈತರ ಬೆಳೆಗಳನ್ನು ಅಗ್ಗದ ದರದಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಹಾಗೂ ಉದ್ಯಮಿಗಳಿಗೆ ಖಜಾನೆ ತುಂಬಿಸಿಕೊಳ್ಳಲು ಅನುಕೂಲ ಕಲ್ಪಿಸುವ ಮುನ್ನಾರ್ ವಾಗಿದೆ . ಶ್ರೀಮಂತ ಉದ್ದಿಮೆಗಳಿಗೆ ಮಣೆ ಹಾಕುತ್ತಿರುವ ನೀತಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನೂತನ ಕಾರ್ಮಿಕರ ಕಾನೂನು ಹಾಗೂ ಎಪಿಎಂಸಿ ಕಾಯ್ದೆ ಸೇರಿದಂತೆ ನೂತನ ವಿದ್ಯುತಯ್ದೆಯನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.
ಪ್ರತಿಭಟನೆಯಲ್ಲಿ ರುಕುಂ ಪಟೇಲ್ ಇಜೇರಿ, ಬಾಪುಗೌಡ ಪಾಟೀಲ ಕಲ್ಲಹಂಗರಗಾ, ಬಶೀರ್ ಸಾಬ್ ಇನಮ್ದಾರ್ , ಶಿವಕುಕಲ್ಲಲ. ಮಹಮೂದ್ ನೂರಿ, ಮಲ್ಲಿಕಾರ್ಜುನ್ ಬೂದಿಹಾಳ್, ಅಶೋಕ್ ವರ್ಚನಹಳ್ಳಿ ,ಮರೆಪ್ಪ ಸರಡಗಿ, ಚಂದ್ರಶೇಖರ್ ನೆರಡಗಿ,ಯೂನುಸ್ ಪಟೇಲ್, ಸಲಿಮ ಕಣ್ಣಿ ,ಸಂತೋಷ್, ಬಸವರಾಜ್ ಸುಬೇದಾರ್, ಸೇರಿದಂತೆ ಇತರ ಮುಖಂಡರು ನೂರಾರು ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಮನವಿ ಪತ್ರವನ್ನು ತಶಿಲ್ದಾರ ಸಿದ್ದರಾಯ ಬೋಸ್ಗಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.