ಕಾರ್ಮಿಕ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟದ 75 ನೇ ವಾರ್ಷೀಕೋತ್ಸ

0
25

ಕಲಬುರಗಿ: ಇಂದು ಕಾರ್ಮಿಕ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟ (WFTU) ಸಂಸ್ಥಾಪನೆಯ 75 ನೇ ವಾರ್ಷೀಕೋತ್ಸದ ಪ್ರಯುಕ್ತ ಸಾರ್ವಜನಿಕ ಸಭೆಯನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಕಲಬುರಗಿ ಜಿಲ್ಲಾ ಸಮಿತಿ ಯಿಂದ ಸಂಘಟಿಸಲಾಯಿತು.

ಈ ವೇಳೆಯಲ್ಲಿ ಭಾಷಣಕಾರರಾಗಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾದ ವಿ.ಜಿ.ದೇಸಾಯಿ ಅವರು ಮಾತನಾಡಿ, ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ (ಡಬ್ಲ್ಯುಎಫ್‌ಟಿಯು) ಕಾರ್ಮಿಕ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟವಾಗಿದೆ. 1945 ರಲ್ಲಿ ಡಬ್ಲ್ಯುಎಫ್‌ಟಿಯು ಸ್ಥಾಪಿಸಲಾಯಿತು. ವಿಶ್ವಸಂಸ್ಥೆಯಂತೆಯೇ ವಿಶ್ವದಾದ್ಯಂತದ ಕಾರ್ಮಿಕ ಸಂಘಗಳನ್ನು ಒಂದೇ ಅಂತರರಾಷ್ಟ್ರೀಯ ಸಂಘಟನೆಯಲ್ಲಿ ಒಟ್ಟುಗೂಡಿಸುವುದು ಇದರ ಉದ್ದೇಶವಾಗಿತ್ತು. ಡಬ್ಲ್ಯುಎಫ್‌ಟಿಯು ಮುಖ್ಯವಾಗಿ ಎಡಪಂಥೀಯ ಚಿಂತನೆಗಳ ಆಧಾರದ ಮೇಲೆ, ಸಮಾಜವಾದ ಪರವಾದ ವಿಚಾರಗಳ ಪ್ರೇರಣೆಯಿಂದ  ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಸಂಬಂಧ ಹೊಂದಿದ ಅಥವಾ ಸಹಾನುಭೂತಿ ಹೊಂದಿದ ಕಾರ್ಮಿಕ ಸಂಘಟನೆಗಳ ಒಕ್ಕೂಟವಾಗಿದೆ. ಒಂದೆಡೆ ಅಮೇರಿಕಾ ಹಾಗೂ ಇತರ ಮುಂದುವರೆದ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ದೇಶಗಳು ಹಾಗೂ ಸೋವಿಯತ್ ಸಮಾಜವಾದಿ ರಷ್ಯಾ ದೇಶಗಳ ನಡುವೆ ಶೀತಲ ಸಮರದ ಸಂದರ್ಭದಲ್ಲಿ, ಡಬ್ಲ್ಯುಎಫ್‌ಟಿಯು ಅಮೇರಿಕಾದ ಸಾಮ್ರಾಜ್ಯವಾದ,ಯುದ್ಧಕೋರ ಆಕ್ರಮಣಕಾರಿ ಧೋರಣೆಗಳ ವಿರುದ್ಧ ಧ್ವನಿಯೆತ್ತುತ್ತಾ ಬಂದಿತು ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಮಿಕ ವರ್ಗದ ಅಂತರಾಷ್ಟ್ರೀಯತೆ, ಭ್ರಾತೃತ್ವವನ್ನು ಎತ್ತಿಹಿಡಿಯುವ ತನ್ನ  ಅಂತರರಾಷ್ಟ್ರೀಯ ಕಾರ್ಯಸೂಚಿಯನ್ನು ಮುನ್ನಡೆಸುವ ಪ್ರಯತ್ನಗಳ ಭಾಗವಾಗಿ ಹಲವಾರು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಟ್ರೇಡ್ ಯೂನಿಯನ್ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತ ಅವರ ಮಧ್ಯೆ ಪರಸ್ಪರ ಸಹಭಾಗಿತ್ವವನ್ನು ಬೆಳೆಸುತ್ತಿದೆ  ಎಂದು ಹೇಳಿದರು.

ಇನ್ನೋರ್ವ ಭಾಷಣಕಾರರಾದ AIUTUC ಜಿಲ್ಲಾ ಉಪಾದಕ್ಷರಾದ ರಾಘವೇಂದ್ರ ಅವರು ಮಾತನಾಡಿ ಇಂದು ಜಾಗತೀಕವಾಗಿ ಅಮೇರಿಕಾ, ಮತ್ತಿತರ ಸಾಮ್ರಾಜ್ಯಶಾಹಿ ದೇಶಗಳ ದುರಾಕ್ರಮಣ, ದಾಳಿ, ಆರ್ಥಿಕ ದಿಗ್ಬಂಧನ, ಸಣ್ಣಪುಟ್ಟ ಪ್ರಾದೇಶಿಕ ಯುದ್ಧಗಳನ್ನು ಹುಟ್ಟುಹಾಕುತ್ತಿರುವ ಸಂದರ್ಭದಲ್ಲಿ  WFTU ನ ಪಾತ್ರ, ಮಹತ್ವ ಹೆಚ್ಚಿದೆ. ಆದ್ದರಿಂದ ನಮ್ಮ ದೇಶವು ಸೇರಿದಂತೆ ಎಲ್ಲಾ ದೇಶಗಳ ದುಡಿಯುವ ಜನತೆ ;ವಿಶ್ವದ ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾರ್ಲ್ ಮಾರ್ಕ್ಸ್ ರವರ ವಿಶ್ವದ ಕಾರ್ಮಿಕರೇ ಒಂದಾಗಿ ’ ಎಂಬ ಉದ್ಘೋಷದ ಆಧಾರದ ಮೇಲೆ ಸಂಕುಚಿತ ರಾಷ್ಟ್ರೀಯತೆಯ ಭೇಧಗಳನ್ನು ಮೀರಿ, ವರ್ಣಬೇಧವನ್ನು, ಜನಾಂಗೀಯ ಬೇಧವನ್ನು ಮೀರಿ ವಿಶ್ವ ಸಾಮ್ರಾಜ್ಯಶಾಹಿ ಆಕ್ರಮಣ ಹಾಗೂ ಯುದ್ಧ ನೀತಿಯ ವಿರುದ್ಧ ಸಮರಶೀಲ ಶಾಂತಿ ಚಳುವಳಿಯನ್ನು ಬೆಳೆಸುತ್ತಾ, ಅಂತಿಮವಾಗಿ ಜಾಗತಿಕವಾಗಿ ಮಾನವನಿಂದ ಮಾನವನ ಶೋಷಣೆಯನ್ನು ಅಳಿಸಿ ಹಾಕುವತ್ತ ಡಬ್ಲ್ಯುಎಫ್‌ಟಿಯು ಅಡಿಯಲ್ಲಿ ಮುನ್ನಡೆಯಬೇಕೆಂದು ಎಐಯುಟಿಯುಸಿ ಕರೆ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಆಶಾ,ಅಂಗನವಾಡಿ, ಬಿಸಿಊಟ ವಿವಿಧ ಕ್ಷೇತ್ರದ ಕಾರ್ಮಿಕರು ಭಾಗವಹಿಸಿದ್ದ ರು.ಸಂಯುಕ್ತ ಅಂಗನವಾಡಿ  ಸಂಘಟನಾಕಾರರಾದ ನಾಗಮಣಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here