ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ 5 ಜನರಿಗೆ ಹತ್ರಾಸ್‌ಗೆ ಹೋಗಲು ಅವಕಾಶ 

0
57

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಮಹಿಳೆಯೊಂದಿಗೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಪಟ್ಟು ಹಿಸಿದ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಯುಪಿ ಪೊಲೀಸರು ಡಿಎನ್‌ಡಿ ಯಲ್ಲಿ ತಡೆಯಲಾಯಿತು.

ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಹೆಚ್ಚಿನ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಡಿಎನ್‌ಡಿ ಮೇಲೆ ನಿಂತಿದರು. ಈ ಸಮಯದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಯುಪಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡಿದ್ದು, ಇವರನ್ನು ಸೇರಿಸಿ ಐದು ಜನರಿಗೆ ಹತ್ರಾಸ್‌ಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಆಡಳಿತ ಹೇಳಿದೆ.

Contact Your\'s Advertisement; 9902492681

ಸುದೀರ್ಘ ಕೋಲಾಹಲದ ನಂತರ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಡಿಎನ್‌ಡಿಗಿಂತ ಮುಂದೆ ಹೋಗಲು ಅವಕಾಶ ನೀಡಲಾಯಿತು.

ಪಿಎಲ್ ಪುನಿಯಾ, ಗುಲಾಮ್ ನಬಿ ಆಜಾದ್, ಪ್ರಮೋದ್ ತಿವಾರಿ ಅವರನ್ನೂ ಮುಂದೆ ಹೋಗಲು ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಮನವಿ ಮಾಡಿದರು. ಡಿಎನ್‌ಡಿಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಯುಪಿ ಪೊಲೀಸರು ಲಾಠಿ ಚಾರ್ಜ್ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here