ಕಲಬುರಗಿ: ತಳವಾರ, ಪರಿವಾರ ಸಮುದಾಯದ ಜನರಿಗೆ ಕೇಂದ್ರ ಸರಕಾರದ ಆದೇಶದಂತೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾ ಪಂಚಾಯತ ಸಾಮಾನ್ಯಭೆಯಲ್ಲಿ ರೆಜುಲೇಷನ್ ಪಾಸ್ ಮಾಡುತ್ತೇವೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಬಿ ಪಾಟೀಲ್ ಹೇಳಿದರು.
ತಳವಾರ, ಪರಿವಾರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 37 ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ 21 ದಿನದ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ತಳವಾರ, ಪರಿವಾರ ಸಮುದಾಯಕ್ಕೆ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿರುವುದು ರಜ್ಯದ ಪ್ರತಿಯೊಬ್ಬ ರಾಜಕೀಯ ನಾಯಕರಿಂದ ಜನಸಾಮಾನ್ಯರಿಗೂ ಗೊತ್ತಾಗಿದೆ. ರಾಜ ಸರಕಾರ ಉದ್ದೇಶಪೂರ್ವಕವಾಗಿ ನಿಮಗೆ ಅನ್ಯಾಯ ಮಾಡುತ್ತಿದೆ. ತಮ್ಮದೇ ಕೇಂದ್ರ ಸರಕಾರ ಮಾಡಿರುವ ಸಂವಿಧಾನಬದ್ಧವಾದ ಈ ಮಸೂದೆಯನ್ನು ಕಡೆಗಣಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಉಗ್ರವಾಗಿ ಹೋರಾಟ ಮಾಡಿದರೆ ಮಾತ್ರ ಜನರ ಬೇಡಿಕೆ ಈಡೇರಿಸುತ್ತದೆ ನೀವು ಕೂಡ ನಿಮ್ಮ ಬೇಡಿಕೆಗಾಗಿ ಉಗ್ರವಾದ ಹೋರಾಟ ಮಾಡಬೇಕು. ವಿರೋಧಪಕ್ಷದವರಾದ ನಾವು ಕೂಡ ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ನ್ಯಾಯಯುವಾದ ಹಕ್ಕು ನಿಮಗೆ ಸಿಗಲೇಬೇಕು, ಅದಕ್ಕಾಗಿ ನಾವು ಕೂಡ ಬೆಂಬಲವಾಗಿ ನಿಂತು ನಿಮ್ಮ ಬೇಡಿಕೆ ಈಡೇರುವವರೆಗೂ ಜೊತೆಗಿರುತ್ತೇವೆ ಎಂದು ಹೇಳಿದರು.
ಈ ಒಂದು ಸಂದರ್ಭದಲ್ಲಿ ಡಾ. ಸರ್ದಾರ್ ರಾಯಪ್ಪ, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಚಂದ್ರಶೇಖರ್ ಜಮಾದಾರ್ ವಕೀಲರು, ಶರಣು ಕೋಳಿ, ಸುನಿತಾ ತಳವಾರ್, ಸುಭಾಷ್ ಮುಖ ಕರವಾಳ, ದೇವನಂದ್, ದೇವರೇ ಶಾಮರಾವ್, ಭೀಮರಾಯ, ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.